ಮಲ್ಪೆ: ಉಡುಪಿ ನಗರಸಭೆ ಮತ್ತು ಸಾಹಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಮನೆಯ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಉಚಿತ ಕಾಂಪೋಸ್ಟ್ ಡ್ರಮ್ ಮತ್ತು ಉಚಿತ ತರಕಾರಿ ಬೀಜ ವಿತರಣೆ ಕಾರ್ಯಕ್ರಮ ಕೊಡವೂರು ಕಾನಂಹಿ ಶ್ರೀ ದೇವಿ ಜ್ಞಾನೋದಯ ಪಾಂಡುರಂಗ ಭಜನಾ ಮಂದಿರದಲ್ಲಿ ನಡೆಯಿತು.
ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ಸಾಹಸ್ ಸಂಸ್ಥೆಯ ಸೂಪರ್ವೈಸರ್ ವಿಶಾಲ ದೇವಾಡಿಗ, ರಾಜೇಶ್, ಬೇಬಿ, ಚಂದ್ರಾವತಿ ಮುಂತಾದವರು ಉಪಸ್ಥಿತರಿದ್ದರು.