ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ 2022-23 ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣವು ಏಪ್ರಿಲ್ -2022 ರ ಮಾಹೆಯಲ್ಲಿ ಪ್ರಾರಂಭವಾಗಲಿದ್ದು ಈ ಬಗ್ಗೆ ವ್ಯಾಪಾರಸ್ಥರು ನಿಗದಿತ ದಾಖಲೆಗಳಾದ ಉದ್ಯಮದಾರರ ಆಧಾರ್ ಕಾರ್ಡ್ ನಕಲು ಪ್ರತಿ / ವಾಣಿಜ್ಯ ಕಟ್ಟಡದ ಬಾಡಿಗೆ ಕರಾರು ಪತ್ರ / ಒಪ್ಪಿಗೆ ಪತ್ರ / ಕಟ್ಟಡ ಮಾಲೀಕರ ಪುರಾವೆ , ಅಫಿದಾವಿತ್ ಹಾಗೂ ಹಿಂದಿನ ವರ್ಷದ ವ್ಯಾಪಾರ ಪರವಾನಿಗೆ ಪತ್ರದೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಉದ್ಯಮ ಪರವಾನಿಗೆಯನ್ನು ನವೀಕರಿಸಿಕೊಳ್ಳಬಹುದಾಗಿರುತ್ತದೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದಲ್ಲಿ ತಕ್ಷಣವೇ ಪಟ್ಟಣ ಪಂಚಾಯತ್ ಕಛೇರಿಗೆ ನಿಗದಿತ ದಾಖಲೆಗಳಾದ, ಅರ್ಜಿದಾರರ ಪೋಟೋ, ಅರ್ಜಿದಾರರ ಆಧಾರ ಕಾರ್ಡ್ ನಕಲು ಪ್ರತಿ, ವಾಣಿಜ್ಯ ಕಟ್ಟಡದ ಬಾಡಿಗೆ ಕರಾರು ಪತ್ರ / ಒಪ್ಪಿಗೆ ಪತ್ರ / ಕಟ್ಟಡ ಮಾಲೀಕರ ಪುರಾವೆ, ಅಫಿದಾವಿತ್ ನೊಂದಿಗೆ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸುವಂತೆ, ಈ ಬಗ್ಗೆ ತಪ್ಪಿದ್ದಲ್ಲಿ ಕರ್ನಾಟಕ ಪೌರಸಭೆ ಅಧಿನಿಯಮ ಪ್ರಕಾರ ದಂಡನೆ ವಿಧಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.