ಗಣಿತನಗರ: 2021ರ ಸಾಲಿನ ನೀಟ್ ಪರೀಕ್ಷೆಯ ಮೊದಲ ಸುತ್ತಿನ ಪ್ರಕ್ರಿಯೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ 73 ವಿದ್ಯಾರ್ಥಿಗಳು ಎಂಬಿಬಿಎಸ್ ಗೆ ಆಯ್ಕೆಗೊಂಡಿದ್ದು, ಇದೀಗ ನಿನ್ನೆ ಬಂದ ಎರಡನೇ ಸುತ್ತಿನಲ್ಲಿ ಮತ್ತೆ 4 ವಿದ್ಯಾರ್ಥಿಗಳು ಎಂಬಿಬಿಎಸ್ ಗೆ ಆಯ್ಕೆಗೊಂಡಿದ್ದಾರೆ. ಎರಡನೇ ಸುತ್ತಿನ್ ಮುಕ್ತಾಯದಲ್ಲಿ ಜ್ಞಾನಸುಧಾದ ಒಟ್ಟು 77 ವಿದ್ಯಾರ್ಥಿಗಳು ಎಂಬಿಬಿಎಸ್ ಸೇರ್ಪಡೆಗೊಂಡಿದ್ದಾರೆ.
ಕರ್ನಾಟಕದ ಪ್ರತಿಷ್ಟಿತ ಮೆಡಿಕಲ್ ಕಾಲೇಜುಗಳಾದ ಬೆಂಗಳೂರು ಮೆಡಿಕಲ್ ಕಾಲೇಜಿಗೆ 5, ಮೈಸೂರು ಮೆಡಿಕಲ್ ಕಾಲೇಜಿಗೆ 7, ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿಗೆ 4, ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ 9, ಮಂಗಳೂರು ಕೆಎಂಸಿಗೆ 2 ವಿದ್ಯಾರ್ಥಿಗಳು ಸೇರಿ, ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಪಡೆದಿದ್ದಾರೆ.
ರಾಷ್ಟ್ರಮಟ್ಟದಲ್ಲಿ ನಡೆದ ನೀಟ್-2021ರ ಪರೀಕ್ಷೆಯಲ್ಲಿ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಜ್ಞಾನಸುಧಾದ ಒಟ್ಟು 320 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಸುಕ್ಷಿತ್ ಪಿ.ಎಚ್ 720ರಲ್ಲಿ 685 ಅಂಕ ಗಳಿಸಿ ರಾಷ್ಟ್ರಮಟ್ಟದಲ್ಲಿ 640ನೇ ರ‍್ಯಾಂಕ್ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ಅಕಾಡೆಮಿಯ ಕಾರ್ಯವೈಖರಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಶ್ಲಾಘಿಸಿದ್ದು, ಮುಂದಿನ ದಿನಗಳಲ್ಲಿ ಈ 77 ವಿದ್ಯಾರ್ಥಿಗಳೂ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಹರ್ಷ ವ್ಯಕ್ತಪಡಿದ್ದಾರೆ.