ಮುಂಬಯಿ: ಐಪಿಎಲ್ ಗೆ ಮುಹೂರ್ತ ಫಿಕ್ಸ್ ಆಗಿದ್ದು ಈ ಬಾರಿ ಒಂದೇ ರಾಜ್ಯದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಐಪಿಎಲ್ ಚೇರ್ಮೆನ್ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಮುಂಬಯಿ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ಇಂದು ನಡೆದ ಬಿಸಿಸಿಐ ಸಭೆಯಲ್ಲಿ ಪ್ರತಿಷ್ಠಿತ ಕ್ರಿಕೆಟ್ ಹಬ್ಬಕ್ಕೆ ಮುಹೂರ್ತ ನಿಗದಿ ಮಾಡಲಾಯಿತು. 55 ಪಂದ್ಯಗಳು ಮುಂಬಯಿಯಲ್ಲಿ ನಡೆಯಲಿದ್ದು ಉಳಿದ 15 ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.
ಒಟ್ಟು ಹತ್ತು ತಂಡಗಳು ಈ ಬಾರಿಯ ಐಪಿಎಲ್ ನಲ್ಲಿ ಮೈದಾನಕ್ಕೆ ಇಳಿಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಮೇ 29ರಂದು ಐಪಿಎಲ್ ಫೈನಲ್ ನಡೆಯಲಿದ್ದು, ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜಯಂಟ್ಸ್ ನೂತನವಾಗಿ ಸೇರ್ಪಡೆಯಾಗಿವೆ.