ಬ್ರಹ್ಮಾವರ: ಸ.ಹಿ.ಪ್ರಾ ಶಾಲೆ ಸಾಯ್ಬ್ರಕಟ್ಟೆ ಇಕೋ ಕ್ಲಬ್ ವಿದ್ಯಾರ್ಥಿಗಳು ಕ್ಷೇತ್ರ ಭೇಟಿಯ ಅಂಗವಾಗಿ ಪ್ರಗತಿಪರ ಕೃಷಿಕ ಸತೀಶ ಶೆಟ್ಟಿ ಯಡ್ತಾಡಿ ಇವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿದರು.
ಸತೀಶ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ತಮ್ಮ ಕೃಷಿ ಚಟುವಟಿಕೆಯಲ್ಲಿ ವೈಜ್ಞಾನಿಕ ಮತ್ತು ಯಾಂತ್ರಿಕತೆಯ ಮೂಲಕ ತೆಂಗು, ಭತ್ತ, ಅಡಿಕೆ, ಹಣ್ಣಿನ ಸಸ್ಯಗಳು, ತರಕಾರಿ ಬೆಳೆಗಳು ಮುಂತಾದ ಬೆಳೆ ಬೆಳೆಯುವ ಬಗ್ಗೆ ಮಾಹಿತಿ ನೀಡಿದರು.
ಚಿಕ್ಕ ವಯಸ್ಸಿನಲ್ಲಿಯೇ ಕೃಷಿ ಬಗ್ಗೆ ಆಸಕ್ತಿಯನ್ನು ಹೊಂದುವುದರಿಂದ ಆರೋಗ್ಯ ಮತ್ತು ಆಹಾರದಲ್ಲಿ ಸ್ವಾವಲಂಬನೆಯಿಂದ ಭವ್ಯ ಭಾರತವನ್ನು ರೂಪಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸಿ ಆರ್ ಪಿ ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕರಾದ ಸತೀಶ್ಚಂದ್ರ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.