ಕೊಡವೂರು: ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಪ್ರಾಥಮಿಕ ಅರೋಗ್ಯ ಕೇಂದ್ರ ಮಲ್ಪೆ ಆಯೋಜನೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ನಡೆಯಿತು. ಅರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು.
ನಗರಸಭಾ ಸದ್ಯಸ ವಿಜಯ್ ಕೊಡವೂರ್, ಕೆ.ಎಂ.ಎಫ್ನ ರವಿರಾಜ್ ಹೆಗ್ಡೆ, ಬ್ರಾಹ್ಮಣ ವಲಯ ಅಧ್ಯಕ್ಷ ನಾರಾಯಣ ಬಲ್ಲಾಳ್, ಮಲ್ಪೆ ಅರೋಗ್ಯ ಕೇಂದ್ರ ವೈದ್ಯಧಿಕಾರಿ ಡಾ. ಜೇಷ್ಮ, ಮಹಿಳಾ ಸಮಿತಿ ಪ್ರಮುಖರಾದ ಯಶೋಧ ಹಾಗೂ ಇಲಾಖೆಯ ವೈದ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಚೇರಿಯ ಉಡುಪಿ ಕ್ಷಯಘಟಕದ ಮೇಲ್ವಿಚಾರಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರಿಗೆ ಉಚಿತ ಬಿಪಿ, ಶುಗರ್, ಮಲೇರಿಯಾ, ಡೆಂಗ್ಯೂ, ಕ್ಷಯರೋಗ, ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ಕ್ಯಾನ್ಸರ್ ಪರೀಕ್ಷೆ, ತಂಬಾಕು ಮತ್ತು ಮಧ್ಯಪಾನವರ್ಜನಾ ಆಪ್ತ ಸಮಾಲೋಚನೆ, ಕೋವಿಡ್ ಲಸಿಕೆ, ಆಯುಷ್ ಚಿಕಿತ್ಸೆ, ಅಯುಷ್ಮಾನ್ ಕಾರ್ಡ್ ಈ ಎಲ್ಲಾ ವ್ಯವಸ್ಥೆಯನ್ನು ಶಿಬಿರದಲ್ಲಿ ಉಚಿತವಾಗಿ ನೀಡಲಾಯಿತು.