ಮಣಿಪಾಲ: ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳ ಬಳಕೆಯು ದಿನೆ ದಿನೇ ಹೆಚ್ಚುತ್ತಿದ್ದು ಇದರಿಂದ ಅವುಗಳ ಅಳವಡಿಗೆ ಮತ್ತು ದುರಸ್ತಿಗೆ ಬೇಕಾಗುವ ಟೆಕ್ನಿಷಿಯನ್‌ಗಳಿಗೂ ಉತ್ತಮ ಬೇಡಿಕೆ ಬಂದಿದೆ. ಉತ್ತಮ ನುರಿತ ತರಬೇತಿ ಪಡೆದ ಕೆಲಸಗಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. ಸ್ವಂತ ಉದ್ಯಮಿಯಾಗಿ ಈ ಕ್ಷೇತ್ರದಲ್ಲಿ ದುಡಿಯಬಹುದು ಮತ್ತು ಇತರರಿಗೆ ಕೆಲಸವನ್ನು ನೀಡುವಂತಾಗಬಹುದು ಎಂದು ಮಣಿಪಾಲ ಪೊಲೀಸ್ ಠಾಣೆಯ ಪಿ.ಎಸ್.ಐ ಸುಷ್ಮಾ ಜಿ. ಭಂಡಾರಿ ಹೇಳಿದರು.
ಅವರು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಆಸಕ್ತ ಶಿಬಿರಾರ್ಥಿಗಳಿಗಾಗಿ 30 ದಿನಗಳ ಕಾಲ ಹಮ್ಮಿಕೊಂಡ ಟಿವಿ ಟೆಕ್ನಿಷಿಯನ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕರಾದ ಸವಿತಾ ಎಸ್ ನಾಯಕ್ ಸ್ವಾಗತಿಸಿ, ಸಂಸ್ಥೆಯ ಕಛೇರಿ ಸಹಾಯಕರಾದ ಸಂತೋಷ್ ವಂದಿಸಿದರು. ಶಿಬಿರಾರ್ಥಿಗಳಾದ ಮಿಥುನ್, ರಕ್ಷಿತಾ ಮತ್ತು ಪ್ರಜ್ವಲ್ ತರಬೇತಿಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪನ್ಯಾಸಕಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.