ಕಾರ್ಕಳ: ಹಲವಾರು ವರ್ಷಗಳಿಂದ ಅಭಿವೃದ್ಧಿ ವಿಷಯದಲ್ಲಿ ಕುಂಟಿತ ಕಂಡಿದ್ದ ನಂದಳಿಕೆ ಗ್ರಾಮ ಪಂಚಾಯತ್ ಗೆ ಈ ಬಾರಿ ವಿವಿಧ ಇಲಾಖೆಗಳ ಮೂಲಕ ಒಟ್ಟು 17 ಕೋಟಿ ಅನುದಾನ ಹರಿದು ಬಂದಿದೆ. ಇದರಲ್ಲಿ ಕಾರ್ಕಳ ಶಾಸಕರು ಹಾಗೂ ಇಂಧನ ಸಚಿವರಾದ ವಿ ಸುನಿಲ್ ಕುಮಾರ್ ಶಿಫಾರಿಸ್ಸಿನ ಮೂಲಕ ಬರೋಬ್ಬರಿ 14 ಕೋಟಿ ಅನುದಾನ ಲಭಿಸಿದೆ ಎಂದು ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ್ ಅಮೀನ್ ಹೇಳಿದರು.
ಒಟ್ಟು ಅನುದಾನದಲ್ಲಿ ಜಲಜೀವನ್ ಮಿಷನ್ ಮೂಲಕ 50 ಲಕ್ಷ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ಇಂಧನ ಸಚಿವರ ಬೆಳಕು ಯೋಜನೆ ಯಡಿಯಲ್ಲಿ ಗ್ರಾಮದ 10 ಮನೆಗೆ ಉಚಿತ ವಿದ್ಯುತ್ ಸಂಪರ್ಕ ಹಾಗೂ 5 ಕಡೆ ಹೊಸ ಟಿಸಿ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಉಳಿದಂತೆ ಗ್ರಾಮ ಪಂಚಾಯತ್ ಅನುದಾನದಿಂದ 17 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅನುದಾನದಿಂದ 13 ಲಕ್ಷದ ಕಾಮಗಾರಿಗಳು ಆರಂಭ ವಾಗಿದೆ. ಗ್ರಾಮಸ್ಥರ ಬಹುದಿನದ ಬೇಡಿಕೆ ಯಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಗೆ 20 ಲಕ್ಷ ವನ್ನು ಮೀಸಲಿರಿಸಲಾಗಿದೆ.
ಅಷ್ಟೇ ಅಲ್ಲದೆ ಬೋಳಾಸ್ ಆಗ್ರೋ ಪ್ರೈ. ಲಿ ನ ಸಿ ಎಸ್ ಆರ್ ಅನುದಾನ ದ ಮೂಲಕ ಗ್ರಾಮಕ್ಕೆ ನೂತನ ಆಂಬುಲೆನ್ಸ್ ಹಾಗೂ ಇ ಸಿ ಜಿ ಯಂತ್ರದ ಖರೀದಿ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1 ಕೋಟಿ ವೆಚ್ಚದಲ್ಲಿ ನಂದಳಿಕೆಯ ಮಜಲಕೆರೆ ಯನ್ನು ಅಭಿವೃದ್ಧಿಪಡಿಸುವ ಯೋಜನೆಯ ಸರ್ವೇ ಕಾರ್ಯ ಮುಗಿದಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ ಹಾಗೂ ಕೆರೆಯ ನೀರನ್ನು ಶುದ್ಧಕರಿಸಿ ಸುತ್ತ ಮುತ್ತಲಿನ ಮನೆಗಳಿಗೆ ನೀಡುವ ಯೋಜನೆಯು ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಒಟ್ಟಿನಲ್ಲಿ ಇಷ್ಟು ದೊಡ್ಡ ಮಟ್ಟದ ಅನುದಾನ ನಂದಳಿಕೆ ಗ್ರಾಮಕ್ಕೆ ಬರುತ್ತಿರುವುದು ಇದೇ ಮೊದಲು. ಇದರಲ್ಲಿ ಪಂಚಾಯತ್ ಸದಸ್ಯರ ಮತ್ತು ಕ್ಷೇತ್ರದ ಶಾಸಕರ ಸಹಕಾರ ಪ್ರಮುಖವಾಗಿದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮ ವನ್ನು ಮಾದರಿ ಗ್ರಾಮ ವಾಗಿ ಮಾಡುವಲ್ಲಿ ಕೆಲಸ ವನ್ನು ಮಾಡುತ್ತೇವೆ ಎಂದು ನಿತ್ಯಾನಂದ್ ಅಮೀನ್ ತಿಳಿಸಿದರು.