ಉಡುಪಿ: ಕುಂದಾಪುರದ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಫೆಬ್ರವರಿ 08 ರಿಂದ ಫೆ. 10 ರವರೆಗೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ. ಫೆ. 08 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಯಾಗ, ಸಪರಿವಾರ ದೇವರಾದ ಶ್ರೀ ಕಾಲಭೈರವೇಶ್ವರ, ಆಂಜನೇಯ, ನಾಗ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 3 ರಿಂದ ಕುಂದಾಪುರ ತಾಲೂಕು ಭಗವದ್ಗೀತಾ ಅಭಿಯಾನ ಸಮಿತಿಯಿಂದ ಸಂಪೂರ್ಣ ಭಗವದ್ಗೀತಾ ಪಠಣ, ಸಂಜೆ ಭಜನೆ, ಫೆಬ್ರವರಿ 09 ರಂದು ಗುರು ಸನ್ನಿಧಿಯಲ್ಲಿ ಕಲಾಭಿವೃದ್ಧಿ ಹೋಮ, ನವಕ ಪ್ರಧಾನ, ಕಲಶಾಭಿಷೇಕ, ಸತ್ಯನಾರಾಯಣ ಪೂಜೆ, ಮಹಾಪೂಜೆ, ಸಂಜೆ ವಾಸ್ತುಪೂಜೆ, ಬ್ರಹ್ಮಕಲಶ ಸ್ಥಾಪನೆ, ಫೆ. 10 ರಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಚಂಡಿಯಾಗ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನೆರವೇರಲಿದೆ. ರಾತ್ರಿ 9 ರಿಂದ ಹನುಮಗಿರಿ ಮೇಳದವರಿಂದ ‘ತ್ರಿಪುರ ಮಥನ’ ಯಕ್ಷಗಾನ ನಡೆಯಲಿದೆ.
ಫೆ. 08-10: ಶ್ರೀ ಬಗಳಾಂಬ ತಾಯಿ ಪ್ರತಿಷ್ಠಾ ವರ್ಧಂತಿ
ಫೆ. 08-10: ಶ್ರೀ ಬಗಳಾಂಬ ತಾಯಿ ಪ್ರತಿಷ್ಠಾ ವರ್ಧಂತಿ
Date: