ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ರವರು ಮಂಡಿಸಿದ 2022-23 ನೇ ಸಾಲಿನ ಕೇಂದ್ರ ಬಜೆಟ್ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ರಕ್ಷಣಾ ಇಲಾಖೆಯಲ್ಲಿ ಶೇಕಡ 68 ಸ್ಥಳೀಯ ಸಾಮಾಗ್ರಿ ಖರೀದಿ, ಸಹಕಾರ ಸಂಘಗಳ ಸರ್ ಚಾರ್ಜ್ ಶೇಕಡ 12 ನಿಂದ ಶೇಕಡ 7 ಇಳಿಕೆ, ರಾಜ್ಯ ಸರಕಾರಗಳಿಗೆ 50 ವರ್ಷಗಳ ಕಾಲ 1 ಲಕ್ಷ ಕೋಟಿ ಅನುದಾನ, ಡಿಜಿಟಲೀಕರಣಕ್ಕೆ ವಿಶೇಷ ಪ್ರಾಮುಖ್ಯತೆ ಹಾಗೂ ನೇರ ತೆರಿಗೆ, ಆದಾಯ ತೆರಿಗೆಯನ್ನು ಏರಿಕೆ ಮಾಡದೇ, ಪಂಚರಾಜ್ಯ ಚುನಾವಣೆ ಸಂದರ್ಭದಲ್ಲೂ ಘೋಷಣೆಗೆ ಸೀಮಿತವಾದ ಜನಪ್ರಿಯ ಬಜೆಟ್ ಮಂಡಿಸದೇ ಆರ್ಥಿಕ ಸಬಲೀಕರಣದ ದೂರದೃಷ್ಟಿಯ ಸರ್ವಸ್ಪರ್ಶಿ ಜನಸಾಮಾನ್ಯರ ಬಜೆಟ್ ಮಂಡಿಸಿದ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು ಎಂದು ಯಶ್ಪಾಲ್ ಸುವರ್ಣ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.