ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣಗೈದ ಪ್ರಾಂಶುಪಾಲ ನಿತ್ಯಾನಂದ ವಿ ಗಾಂವ್ಕರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಯುವಜನಾಂಗ ಸಂವಿಧಾನ – ಸಂವಿಧಾನದಲ್ಲಿ ಉಲ್ಲೇಖಿತ ತಾತ್ವಿಕ-ಜೀವನ ಮೌಲ್ಯಗಳು, ಪ್ರಜೆಗಳ ಹಕ್ಕು ಕರ್ತವ್ಯಗಳ ಕುರಿತಾಗಿ ಮನಃಪೂರ್ವಕವಾಗಿ ಅಧ್ಯಯನ ಮಾಡಬೇಕು ಮತ್ತು ಸಂವಿಧಾನದ ಆಶೋತ್ತರಗಳಿಗೆ ಅನುಗುಣವಾಗಿ ಭಾರತ ನಿರ್ಮಾಣದ ಜವಾಬ್ದಾರಿಯನ್ನು ನಿರ್ವಹಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ 2020-21ನೇ ಸಾಲಿನ ಬಿ.ಎ ವಿದ್ಯಾರ್ಥಿಗಳು ಭಾರತ ಸಂವಿಧಾನದ ರಚನಾ ಸಭೆಯ ಚರ್ಚೆ, ನಡಾವಳಿಗಳು ಮತ್ತು ಸಂಪೂರ್ಣ ಸಂವಿಧಾನದ 10 ಸಂಪುಟಗಳನ್ನು ಕಾಲೇಜಿನ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಬೆಂಗಳೂರಿನ ಉದ್ಯಮಿ ದಿನಕರ್ ಶೆಟ್ಟಿ ದಾಸ ಸಾಹಿತ್ಯದ 10 ಸಾವಿರ ಗೀತೆಗಳನ್ನೊಳಗೊಂಡ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕಾಲೇಜಿನ ಬೋಧಕ-ಬೋಧಕೇತರ ವೃಂದ, ರೋವರ್-ರೇಂಜರ್, ಎನ್.ಎಸ್.ಎಸ್ ಹಾಗೂ ರೆಡ್‌ಕ್ರಾಸ್ ವಿದ್ಯಾರ್ಥಿ ಸ್ವಯಂ ಸೇವಕರು ಉಪಸ್ಥಿತರಿದ್ದರು.