ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಇದರ ೨೫ನೇ ವಾರ್ಷಿಕ ಮಹಾಸಭೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಇದರ ಜ್ಞಾನಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಸಭಾದ ಸಾಲಿಗ್ರಾಮ ವಲಯ ಅಧ್ಯಕ್ಷ ಎಂ. ಶಿವರಾಮ ಉಡುಪ ವಹಿಸಿದ್ದರು
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ್ ಹಂದೆ, ವೇ.ಮೂ.ಮಧುಸೂದನ್ ಬಾಯರಿ ಯವರನ್ನು ಸನ್ಮಾನಿಸಲಾಯಿತು. ಡಾಕ್ಟರೇಟ್ ಪದವಿ ಪಡೆದ ಜಗದೀಶ್ ಹೊಳ್ಳ, ಪಿಎಚ್ ಡಿ ಪದವಿ ಪಡೆದ ಬಾಲಕೃಷ್ಣ ನಕ್ಷತ್ರಿ, ಶ್ರೀಧರ ಉಳಿತ್ತಾಯ, ಅಂತರಾಷ್ಟ್ರೀಯ ವೈಟ್‌ಲಿಫ್ಟರ್ ಅಶೋಕ್ ಹೇರ್ಳೆ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕಾರ್ತಿಕ ಮಾಸದಲ್ಲಿ ಭಜನಾ ಸೇವೆ ಸಲ್ಲಿಸಿದ ಸಮುದಾಯದ ಭಜನಾ ತಂಡಗಳಾದ ಶ್ರೀರಾಮ ಭಜನಾ ತಂಡ ಸಾಲಿಗ್ರಾಮ, ಶ್ರೀ ಮಹಾವಿಷ್ಣು ಭಜನಾ ತಂಡ ಪಾರಂಪಳ್ಳಿ, ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ , ಶಾರದ ಭಜನಾ ತಂಡ ಕದ್ರಿಕಟ್ಟು ಕೋಟ, ಶ್ರೀರಾಮ ಭಜನಾ ವಿಶ್ವಸ್ಥ ಮಂಡಳಿ ಬಾಳೆಕುದ್ರು, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಮಣೂರು, ಶ್ರೀ ಮಹಾಗಣಪತಿ ಭಜನಾ ಮಂಡಳಿ ಕಾರ್ಕಡ ಇವರುಗಳನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು. ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಾಹಿತಿ, ನಿವೃತ್ತ ಉಪನ್ಯಾಸಕ ಉಪೇಂದ್ರ ಸೋಮಯಾಜಿ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಉಪಸ್ಥಿತರಿದ್ದರು. ವಾರ್ಷಿಕ ವರದಿ ಹಾಗೂ ವಾರ್ಷಿಕ ಲೆಕ್ಕವನ್ನು ಸುಬ್ರಹ್ಮಣ್ಯ ಹೇರ್ಳೆ ಮಂಡಿಸಿದರು. ಸನ್ಮಾನ ಪತ್ರವನ್ನು ಲಕ್ಷ್ಮೀನಾರಾಯಣ ಹೊಳ್ಳ, ನಾಗರಾಜ ಮಧ್ಯಸ್ಥ, ಸುಬ್ರಾಯ ಉರಾಳ, ಕೃಷ್ಣಪ್ರಸಾದ್ ವೈ ಹೇರ್ಳೆ ವಾಚಿಸಿದರು. ಅತಿಥಿಗಳನ್ನು ಮಹಾಸಭಾದ ಕಾರ್ಯದರ್ಶಿ ಕೆ.ರಾಜಾರಾಮ್ ಐತಾಳ್ ಸ್ವಾಗತಿಸಿ ನಿರೂಪಿಸಿದರು. ಮಹಾಸಭಾದ ಪಿ.ಸಿ ಹೊಳ್ಳ ಸಹಕರಿಸಿದರು.