ಕಾರ್ಕಳ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ಭವ್ಯ ಭಾರತದ ಹೆಮ್ಮೆಯ ಪ್ರಜೆಗಳಾಗಿ ದೇಶದೊಂದಿಗೆ ನಾನು ಶ್ರದ್ಧೆಯಿಂದ ತೊಡಗಿಸಿಕೊಳ್ಳುತ್ತೇನೆ. ದೇಶದ ಏಳಿಗೆಗೆ ಕಾಯ ವಾಚ ಮನಸ ಶ್ರಮಿಸುತ್ತೇನೆ ಎಂಬ ಸಂಕಲ್ಪ ತೊಡಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಗಣಿತನಗರ ಹಾಗೂ ಉಡುಪಿ ಜ್ಞಾನಸುಧಾ ನಾಗಬನ ಕ್ಯಾಂಪಸ್ ಶಿಕ್ಷಣ ಸಂಸ್ಥೆಗಳಲ್ಲಿ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು. ಭಾರತ ವಿಶ್ವದ ಅತ್ಯಂತ ಪ್ರಾಚೀನ ರಾಷ್ಟ್ರ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಭಾವೈಕ್ಯತೆಯ ಪ್ರಜಾಫ್ರಭುತ್ವದ ತವರೂರು. ತಾಯ್ನಾಡಿನ ವಾರಸುದಾರರಾದ ನಾವು ಭಾರತವನ್ನು ವಿಶ್ವದಲ್ಲಿ ಗೆಲ್ಲಿಸಲು ಪ್ರತಿಯೊಬ್ಬ ನಾಗರಿಕನ ತ್ಯಾಗ ಅತ್ಯಗತ್ಯ ಎಂದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಎನ್‌ಸಿಸಿ ಎ ಸರ್ಟಿಪಿಕೇಟ್ ವಿತರಿಸಲಾಯಿತು. ಎಪಿಜಿಇಟಿ ಟ್ರಸ್ಟಿ ಕರುಣಾಕರ ಶೆಟ್ಟಿ, ಕೆಜೆಎಸ್‌ಪಿಯು ಪ್ರಾಂಶುಪಾಲ ದಿನೇಶ್ ಕೊಡವೂರ್, ಯುಜೆಎಸ್‌ಪಿಯು ಪ್ರಾಂಶುಪಾಲ ಗಣೇಶ್ ಶೆಟ್ಟಿ, ಕೆಜೆಇಎಂಎಚ್‌ಎಸ್ ಪ್ರಾಂಶುಪಾಲ ಉಷಾ ರಾವ್ ಯು, ಉಪ ಪ್ರಾಂಶುಪಾಲರುಗಳಾದ ಸಾಹಿತ್ಯ, ಸಂತೋಷ್, ವಾಣಿ ಕೆ., ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಎನ್‌ಸಿಸಿ ಅಧಿಕಾರಿ ಸುಮಿತ್ ಇ ಉಪಸ್ಥಿತರಿದ್ದರು.