ಕಾರ್ಕಳ: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಸಂಘಟನೆ, ಉಡುಪಿ ಜಿಲ್ಲಾಡಳಿತ, ಮತ್ತು ಜಿಲ್ಲಾ ಪಂಚಾಯತ್ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ ಸ್ವಚ್ಛ ಸಾಣೂರು ತಂಡದಿಂದ ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಕ್ಲೀನ್ ಇಂಡಿಯಾ ಪ್ಲಾಸ್ಟಿಕ್ ಮುಕ್ತ ಪ್ರದೇಶ ಕಾರ್ಯಕ್ರಮದಡಿ 17ನೇ ವಾರದ ಸ್ವಚ್ಛತಾ ಸಾಪ್ತಾಹಿಕ ಅಭಿಯಾನ ಇಂದು ನಡೆಯಿತು. ಜೋಡುಗರಡಿ ಬಳಿಯಿಂದ ಪ್ರಾರಂಭಿಸಿ ದೆಂದಬೆಟ್ಟು ರಸ್ತೆ ವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು.
ವೇದಮೂರ್ತಿ ಶ್ರೀರಾಮ್ ಭಟ್, ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರು ಪ್ರವೀಣ್ ಕೋಟ್ಯಾನ್, ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಕಾರ್ಯದರ್ಶಿ ಮೋಹನ್ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ್ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ಮಡಿವಾಳ, ಜಗದೀಶ್ ಕುಮಾರ್, ಪದಾಧಿಕಾರಿಗಳಾದ ಪ್ರಸನ್ನ ಆಚಾರ್ಯ, ಜಯನ್ ಶೆಟ್ಟಿ, ಜಯ ಶೆಟ್ಟಿಗಾರ್, ರಮೇಶ್ ಆಚಾರ್ಯ, ಶ್ರೀನಿವಾಸ್ ಆಚಾರ್ಯ, ವಿದ್ಯಾನಂದ್ ಕೋಟ್ಯಾನ್, ಸುದರ್ಶನ್ ನಾಯ್ಕ್, ಪವನ್, ಸಮೃದ್, ಸಮರ್ಥ್, ಕೀರ್ತನ್, ಆರೋಗ್ಯ ಇಲಾಖೆಯ ಕಾರ್ಯಕರ್ತೆ ಅಶ್ವಿನಿ, ಅಣ್ಣಪ್ಪ ಸ್ವಾಮಿ ಸ್ವಸಹಾಯ ಸಂಘದ ಸಂತೋಷ್ ಪೂಜಾರಿ, ರಾಜೇಶ್ ಆಚಾರ್ಯ, ಅಶ್ವಥ್ ನಾರಾಯಣ, ವಿಶ್ವನಾಥ್ ಪೂಜಾರಿ ಮೊದಲಾದವರು ಅಭಿಯಾನದಲ್ಲಿ ಭಾಗವಹಿಸಿದ್ದರು.