ಉಡುಪಿ: ಉಡುಪಿಯ ಉನ್ನತಿ ಕ್ಯಾರಿಯರ್ ಅಕಾಡೆಮಿಯಲ್ಲಿ ರಾಷ್ಟ್ರೀಯ ಯುವ ದಿವಸದ ಅಂಗವಾಗಿ ಭಾರತದ ಯುವ ಜನಸಂಖ್ಯೆಯ ಲಾಭಾಂಶ-ಒಂದು ಮುನ್ನೋಟ ಸಂವಾದ ಕಾರ್ಯಕ್ರಮ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರಮೇಶ್ ಕೌಡೂರ್ ರವರು ಯುವ ಜನರ ಸಾಮಾಜಿಕ ಬದ್ಧತೆ ಹಾಗೂ ಸೇವೆ ವಿಷಯದಲ್ಲಿ, ಐಐಎಂ ಮಹಾತ್ಮಾ ಗಾಂಧಿ ಮೆಮೋರಿಯಲ್ ಫೆಲೋಶಿಪ್ ನ ಫೆಲೋ ರಾಹುಲ್ ಬೆನಕಟ್ಟಿಯವರು ಕೌಶಲ್ಯ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ ಹಾಗೂ ಮೆಂಡನ್ ಕನ್ಸಲ್ಟೆನ್ಸಿ ಪ್ರೈ ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಸುನಿಲ್ ಸಾಲಿಯಾನ್ ರವರು ಜಾಗತಿಕ ಸ್ಪರ್ಧೆಗೆ ಹೊಸ ಪೀಳಿಗೆಯ ಉದ್ಯೋಗದಾತರ ಸೃಷ್ಟಿ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ನಂತರ ವಿದ್ಯಾರ್ಥಿಗಳಿಂದ ಸಂವಾದ ನಡೆಯಿತು.
ಉನ್ನತಿ ಕ್ಯಾರಿಯರ್ ಅಕಾಡೆಮಿ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ ಪೌರ್ಣಮಿ ಪ್ರೇಮ್ ಶೆಟ್ಟಿ ವಂದಿಸಿದರು. ತರಬೇತುದಾರ ನವೀನ್ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ, ಐನೇಶ್, ಸುಪ್ರೀತ ಉಪಸ್ಥಿತರಿದ್ದರು.