ಉಡುಪಿ: ಕೊರೊನಾ ಮೂರನೇ ಅಲೆಯ ಸೋಂಕು ಸಾರ್ವಜನಿಕ ವಲಯದಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಜಾಗ್ರತಿ ಮೂಡಿಸುವ ಅಭಿಯಾನವು ನಗರದಲ್ಲಿ ಇಂದು ನಡೆಯಿತು.
ಕಲ್ಸಂಕ ಸರ್ಕಲ್ ಬಳಿ ಅಭಿಯಾನಕ್ಕೆ ನಗರ ಪೊಲೀಸ್ ಠಾಣೆಯ ಎ.ಎಸ್.ಐ ಹರೀಶ್ ಚಾಲನೆ ನೀಡಿದರು. ಅಭಿಯಾನ ಜಾಥಾ ಸಿಟಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ ಹಾಗೂ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.
ಕೊರೊನಾ ಸೂಕ್ಷ್ಮಾಣುವಿನ ಐದು ಅಡಿಯ ಮಾದರಿಯ ತದ್ರೂಪವನ್ನು ರಚಿಸಲಾಗಿತ್ತು. ರೋಗಾಣು ಕಲಾಕೃತಿಯೊಳಗಿದ್ದು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ನಗರದ ಪ್ರಮುಖ ಮಾರ್ಗಗಳಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದರು.
ಕೊರೊನಾ ರೋಗಣು ಕಲಾಕೃತಿಯನ್ನು ಕಲಾವಿದರಾದ ಮಹೇಶ್ ಮತ್ತು ಲೊಕೇಶ್ ರಚಿಸಿದ್ದರು. ಅಭಿಯಾನದಲ್ಲಿ ಕೆ. ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ರಾಜೇಶ್ ದೇವಾಡಿಗ ಕಾಪು, ಡೇವಿಡ್ ಕುಕ್ಕಿಕಟ್ಟೆ ಮೊದಲಾದವರಿದ್ದರು.