Friday, September 20, 2024
Friday, September 20, 2024

ಕೋಡಿ- ಜಲಜೀವನ್ ಯೋಜನೆಗೆ ಶಂಕುಸ್ಥಾಪನೆ

ಕೋಡಿ- ಜಲಜೀವನ್ ಯೋಜನೆಗೆ ಶಂಕುಸ್ಥಾಪನೆ

Date:

ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನೂತನವಾಗಿ ನಿರ್ಮಿಸುವ ನೀರಿನ ಟ್ಯಾಂಕ್‌ಗೆ ಶಂಕುಸ್ಥಾಪನೆಯನ್ನು ಗ್ರಾ. ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್ ನೇರವೇರಿಸಿದರು.

ಬಳಿಕ ಮಾತನಾಡಿದ ಅವರು, ಕೋಡಿಬೆಂಗ್ರೆಯ ಜನತೆಯ ಬಹುವರ್ಷದ ಕನಸು ನನಸಾಗುತ್ತಿದೆ ಹಾಗೂ ಕೆಮ್ಮಣ್ಣಿನಿಂದ ಹೊಪ್ ಪೈಪ್ ಮುಖಾಂತರ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಾತನಾಡಿ, ಒಂದು ಕೋಟಿ ಮೊತ್ತದ ಯೋಜನೆಯಾಗಿದ್ದು, ಪ್ರತಿ ಮನೆಗೆ ಕಾರ್ಯಾತ್ಮಕ ನಳ್ಳಿ ಸಂಪರ್ಕ ನೀಡಲಾಗುವುದು ಹಾಗೂ ಸಮುದಾಯ ವಂತಿಗೆಯ ಅಗತ್ಯತೆ ಬಗ್ಗೆ ವಿವರಿಸಿದರು.

ಪಂಚಾಯತ್ ರಾಜ್ ಕಿರಿಯ ಇಂಜಿನಿಯರ್‌ರಾದ ಮೋಹನ್ ನಾಯ್ಕ್, ಗ್ರಾ ಪಂ. ಸದಸ್ಯರಾದ ವಿನಯ್ ಅಮೀನ್, ಪ್ರಸಾದ್, ರಶ್ಮಿತಾ, ಕುಸುಮ, ಗುತ್ತಿಗೆದಾರರಾದ ಜಯಕುಮಾರ್, ಪ್ರಶಾಂತ್, ಗಣೇಶ್, ನಾಗರಾಜ ಕುಂದರ್, ಮನೋಹರ್ ಕುಂದರ್, ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಜಯ ಎಸ್ ಕುಂದರ್, ಕೆಎಫ್ಡಿಸಿ ನಿರ್ದೇಶಕ ಸಂದೀಪ್ ಕುಂದರ್, ರಾಘವೇಂದ್ರ ಸುವರ್ಣ, ಜಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!