ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಚಾಂಪಿಯನಶಿಪ್ ಗಳಿಸಿದೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ರನ್ನರ್ಸ್ ಪ್ರಶಸ್ತಿ ಗಳಿಸಿದೆ. ಆಳ್ವಾಸ್ ಪ್ರಥಮ ದರ್ಜೆ ಕಾಲೇಜಿನ ಅಕ್ಷಯ್ ಕೃಷ್ಣ ಮಿಸ್ಟರ್ ಯುನಿವರ್ಸಿಟಿ ಕಿರೀಟ ಧರಿಸಿದರು. ವಿವಿಧ ಪ್ರಕಾರಗಳ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಹಲವು ಕಾಲೇಜುಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಮಲ್ಪೆ ಲಯನ್ಸ್ ಅಧ್ಯಕ್ಷ ಕೃಷ್ಣಾನಂದ ಮಲ್ಪೆ, ಶಿಕ್ಷಣ ತಜ್ಞ ದಯಾನಂದ ಶೆಟ್ಟಿ ಕೊಜಕುಳಿ, ನಗರಸಭಾ ಸದಸ್ಯ ವಿಜಯ ಕೊಡವೂರು, ಮಂಗಳೂರು ವಿ.ವಿ. ಪರವಾಗಿ ದೈಹಿಕ ಶಿಕ್ಷಣ ಉಪ ನಿರ್ದೇಶಕ ಹರಿದಾಸ ಕೂಳೂರು ಪರಿಶೀಲಕರಾಗಿ, ಹರೀಶ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಬಾಡಿ ಬಿಲ್ಡರ್ ಅಸೋಸಿಯೇಶನ್ ಕಾರ್ಯದರ್ಶಿ ದಿಲೀಪ್ ಕುಮಾರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪ್ರಶಸ್ತಿಗಳನ್ನು ವಿತರಿಸಿದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮಂಜುನಾಥ ಸ್ವಾಗತಿಸಿ, ಕನ್ನಡ ಸಹ ಪ್ರಾಧ್ಯಾಪಕ ಡಾ. ಹೆಚ್.ಕೆ. ವೆಂಕಟೇಶ್ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್ ವಂದಿಸಿ ಪ್ರಶಸ್ತಿ ವಿಜೇತರ ವಿವರಗಳನ್ನು ನೀಡಿದರು.
ವಿಜೇತರ ವಿವರ:
60 ಕೆ.ಜಿ. ವಿಭಾಗ: ಅಭಿಲಾಷ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕಡಿಯೂರು ಪ್ರಥಮ, ಶ್ರೀಧರ ಭಂಡಾರ್‌ಕರ್ಸ ಕಾಲೇಜು ಕುಂದಾಪುರ ದ್ವಿತೀಯ, ವೈಭವ್ ಸರಕಾರಿ ಪ್ರಥಮ
ದರ್ಜೆ ಕಾಲೇಜು ಬಾರ್ಕೂರು ತೃತೀಯ.
65 ಕೆ.ಜಿ. ವಿಭಾಗ: ಶರತ್ ಶೇರಿಗಾರ್ ಆಳ್ವಾಸ್ ಕಾಲೇಜು ಮೂಡಬಿದಿರೆ ಪ್ರಥಮ, ಅಮೃತ್ ಎನ್.ಕೆ. ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು ದ್ವಿತೀಯ, ಶರತ್ ಜಿ. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕಡಿಯೂರು ತೃತೀಯ.
70 ಕೆ.ಜಿ. ವಿಭಾಗ: ಜಯಜಿತ್ ಸಿಂಗ್ ಆಳ್ವಾಸ್ ಕಾಲೇಜು ಮೂಡಬಿದಿರೆ ಪ್ರಥಮ, ಕಾರ್ತಿಕ್ ರಾಜ್ ವಿವೇಕಾನಂದ ಕಾಲೇಜು ಪುತ್ತೂರು ದ್ವಿತೀಯ, ರಿಯಾನ್ ಅನ್ಸಾನ್ ಕುಟಿನೋ ಸಂತ ಅಲೋಶಿಯಸ್ ಕಾಲೇಜು ತೃತೀಯ.
75 ಕೆ.ಜಿ. ವಿಭಾಗ: ಕಾರ್ತಿಕ್ ಬಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ ಪ್ರಥಮ, ಯೋಗೀಶ್ ಆಳ್ವಾಸ್ ಕಾಲೇಜು ಮೂಡಬಿಡಿದರೆ ದ್ವಿತೀಯ, ವಿಶ್ವಾಸ್ ಭಂಡರ್‌ಕರ್ಸ್ ಕಾಲೇಜು ಕುಂದಾಪುರ ತೃತೀಯ.
80 ಕೆ.ಜಿ. ವಿಭಾಗ: ಪ್ರಜ್ವಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಪ್ರಥಮ. 85 ಕೆ.ಜಿ. ವಿಭಾಗ: ಅಕ್ಷಯ್ ಕೃಷ್ಣ ಆಳ್ವಾಸ್ ಕಾಲೇಜು ಮೂಡಬಿಡಿದರೆ ಪ್ರಥಮ.
90 ಕೆ.ಜಿ. ವಿಭಾಗ: ಮೋಕ್ಷಿತ್ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಪ್ರಥಮ, ರೋಹಿತ್ ಜಿ. ಕ್ರಾಸ್‌ಲ್ಯಾಂಡ್ ಕಾಲೇಜು ಬ್ರಹ್ಮಾವರ ದ್ವಿತೀಯ.