ಉಡುಪಿ: ಭೌತಶಾಸ್ತ್ರವನ್ನು ಮಕ್ಕಳಿಗೆ ಕುತೂಹಲಕಾರಿಯಾಗಿ ಬೋಧಿಸುವ ಕೌಶಲ್ಯವು ಉಪನ್ಯಾಸಕರಲ್ಲಿ ಕರಗತವಾದಾಗ ಬೋಧಕನ ಬೋಧನೆಯು ಯಶಸ್ವಿಯಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಮಾರುತಿ ಹೇಳಿದರು.
ಅವರು ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು ನಾಗಬನ ಕ್ಯಾಂಪಸ್ ಹಾಗೂ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಸಹಯೋಗದೊಂದಿಗೆ ಜಿಲ್ಲೆಯ ಭೌತಶಾಸ್ತ್ರ ಉಪನ್ಯಾಸಕರಿಗೆ ಆಯೋಜಿಸಿದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶೃಂಗೇರಿಯ ಸ.ಪ.ಪೂ.ಕಾ ಉಪನ್ಯಾಸಕ ಆದಿತ್ಯ ರಾವ್ “ಎನರ್ಜಿ ಅಂಡ್ ಮೊಮೆಂಟಮ್” ಎಂಬ ವಿಷಯವನ್ನು, ಬಂಟಕಲ್ಲಿನ ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅರುಣ್ ಉಪಾಧ್ಯಾಯ “ಎಫೆಕ್ಟಿವ್ ಆನ್‌ಲೈನ್ ಟೀಚಿಂಗ್” ವಿಷಯದ ಕುರಿತಂತೆ ಉಪನ್ಯಾಸವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎಪಿಜಿಇಟಿ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಡಾ. ಪ್ರಕಾಶ್ ಶೆಣೈ, ಕೆಜೆಎಸ್‌ಪಿಯು ಪ್ರಿನ್ಸಿಪಾಲ್ ದಿನೇಶ್ ಎಂ ಕೊಡವೂರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜ್ಞಾನಸುಧಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ವಹಿಸಿದ್ದರು.
ಜಿಲ್ಲಾ ಭೌತಶಾಸ್ತ್ರ ವೇದಿಕೆಯ ಅಧ್ಯಕ್ಷರಾದ ಎ. ಲಕ್ಷ್ಮೀನಾರಾಯಣ ಛಾತ್ರರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಭೌತಶಾಸ್ತ್ರ ವೇದಿಕೆಯ ಕಾರ್ಯದರ್ಶಿ ಸಿ ಎಸ್ ಉಮಾಪತಿ ಸ್ವಾಗತಿಸಿ, ಕೋಶಾಧಿಕಾರಿ ವಿಘ್ನೇಶ್ವರ ಭಟ್ ವಂದಿಸಿದರು.
ಉಪನ್ಯಾಸಕಿ ಸುಷ್ಮಾ ಪ್ರಾರ್ಥಿಸಿ, ಆಶಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.