ಉಡುಪಿ: ಹಿಂದೂ ದೈವ-ದೇವರುಗಳ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವ ವಿಚಾರ ಮತ್ತು ವಿಟ್ಲದಲ್ಲಿ ಕೊರಗಜ್ಜ ದೈವವನ್ನು ಹೋಲುವ ವೇಷವನ್ನು ಧರಿಸಿ ವಿಕೃತಿ ಮೆರೆದವರ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ವಿಹಿಂಪ ಬಜರಂಗದಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪ್ರಮುಖ ದೇವಸ್ಥಾನ ಮತ್ತು ದೈವಸ್ಥಾನಗಳ ಸನ್ನಿಧಿಯಲ್ಲಿ ಇಂದು ಸುಮಾರು 250ಕ್ಕೂ ಹೆಚ್ಚು ಕಡೆಗಳಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಸಾಮೂಹಿಕ ಪ್ರಾರ್ಥನೆ ನಡೆಯಿತು.
ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ ಇಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್, ಜಿಲ್ಲಾ ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್, ಕಾಪು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ಕುಶಲ ನಾಯ್ಕ್ ಪೆರ್ಡೂರು, ಶಂಕರ್ ಕುಕ್ಕೆಹಳ್ಳಿ, ನಿತೇಶ್ ಬೆಳ್ಳಂಪಳ್ಳಿ, ನಿಶಾನ್ ರಾಜ್, ಸುರೇಂದ್ರ ಕಾಂಚನ್, ಅನಿಲ್ ಆತ್ರಾಡಿ, ಪ್ರಕಾಶ್ ಹಿರಿಯಡ್ಕ, ಸಂದೀಪ್ ಶೆಟ್ಟಿ ಬೆಳ್ಳಂಪಳ್ಳಿ, ಸತ್ಯ ನಾಯಕ ಅತ್ರಾಡಿ, ಯುವರಾಜ ಪೆರ್ಡೂರು ಮುಂತಾದವರು ಉಪಸ್ಥಿತರಿದ್ದರು.