ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಐ.ಕ್ಯೂ.ಎ.ಸಿ., ಉದ್ಯೋಗ ಮಾಹಿತಿ ಘಟಕ ಮತ್ತು KNOWLEDGE BELL ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವು 2 ದಿನಗಳ ಕಾಲ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ KNOWLEDGE BELL ಅಕಾಡೆಮಿಯ ಸ್ಥಾಪಕರಾದ ವಿನೋದ್ ತಂತ್ರಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡುತ್ತಾ – ಬಂಡವಾಳ ಹೂಡಿಕೆಯಲ್ಲಿ ಇರುವಂತಹ ವಿವಿಧ ರಿಸ್ಕ್ಗಳ ಬಗ್ಗೆ ಮಾಹಿತಿ ನೀಡಿದರು.
Sensex, Nifty, Kyc, credit rating, Mutual fund, Liquidity, Rule of 72 ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಐಕ್ಯೂಎಸಿ ಸಂಚಾಲಕ ಡಾ. ಸುರೇಶ್ ರೈ ಕೆ. ಅವರು ಮಾತನಾಡುತ್ತಾ, ಬಂಡವಾಳ ಹೂಡಿಕೆ ಮಾಡುವಾಗ ವಹಿಸಬೇಕಾದ ಜಾಗೃತೆಯ ಬಗ್ಗೆ ಅರಿವು ಮೂಡಿಸಿದರು.
ವಾಣಿಜ್ಯ ವಿಭಾಗ ಮುಖ್ಯಸ್ಥ ತಿಮ್ಮಣ್ಣ ಜಿ. ಭಟ್, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಉದಯ ಶೆಟ್ಟಿ ಕೆ., ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್., ಉದ್ಯೋಗ ಮಾಹಿತಿ ಘಟಕಗಳ ಸಂಚಾಲಕರುಗಳಾದ ಉಮೇಶ್ ಪೈ ಮತ್ತು ಡಾ. ಹೆಚ್.ಕೆ. ವೆಂಕಟೇಶ ಉಪಸ್ಥಿತರಿದ್ದರು.
ಅಂತಿಮ ಎಂ.ಕಾಂ. ವಿದ್ಯಾರ್ಥಿಗಳಾದ ಶ್ವೇತಾ ಕೆ. ಸ್ವಾಗತಿಸಿ, ರವೀಂದ್ರ ವಂದಿಸಿದರು. ನವ್ಯಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು.