ಉಡುಪಿ: ರೋಟರಿ ಕ್ಲಬ್, ರೋಟರಾಕ್ಟ್ ಕ್ಲಬ್, ಲಯನ್ಸ್ ಕ್ಲಬ್, ಯುವವಾಹಿನಿ (ರಿ), ಭಾರತ್ ಸ್ಕೌಟ್ಸ್ & ಗೈಡ್ಸ್ ರೋವರ್ ರೇಂಜರ್ಸ್, ತಾಲೂಕು ಎನ್ಎಸ್ಎಸ್ ಘಟಕ, ತಾಲೂಕು ಎಬಿವಿಪಿ ಸಂಘಟನೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಉಡುಪಿ ಪರ್ಯಾವರಣ ಗತಿವಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಕಾರ್ಕಳ ಪೇಟೆಯಲ್ಲಿ ಪರಿಸರಕ್ಕಾಗಿ ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು.
ಆನೆಕರೆಯ ಸರ್ಕಲ್ ಬಳಿ ಪೊಲೀಸ್ ಡಿವೈಎಸ್ಪಿ ವಿಜಯ್ ಪ್ರಸಾದ್, ಠಾಣಾ ಎಸ್ಐ ಮಧು ಬಿ., ಪುರಸಭಾ ಸದಸ್ಯ ಶುಭದ ರಾವ್, ಸ್ಕೌಟ್ಸ್ & ಗೈಡ್ಸ್ ಮುಖ್ಯಸ್ಥೆ ಜ್ಯೋತಿ ಪೈ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ 120 ಕ್ಕೂ ಹೆಚ್ಚಿನವರು ಸೈಕಲ್ ಗಳನ್ನು ಚಲಾಯಿಸಿ ಪರಿಸರ ಜಾಗೃತಿಯನ್ನು ಮೂಡಿಸಿದರು. ಜಾಥದಲ್ಲಿ ಭಾಗವಹಿಸಿದ ಎಲ್ಲರಿಗೂ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ಮತ್ತು ಪದಾಧಿಕಾರಿಗಳು ಹ್ಯಾಟ್ ವಿತರಿಸಿದರು.
ಪರ್ಯಾವರಣ ಸಂಯೋಜಕರಾದ ನಿಟ್ಟೆ ಕಾಲೇಜಿನ ಪ್ರಾಧ್ಯಾಪಕ ಡಾ. ಸುರೇಂದ್ರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಶ್ ನಾಯಕ್ ಸ್ವಾಗತಿಸಿ, ಯುವವಾಹಿನಿ ಅಧ್ಯಕ್ಷರಾದ ತಾರಾನಾಥ್ ವಂದನಾರ್ಪಣೆಗೈದರು. ಮುಕ್ತಿವರ್ಧನ ಕಾರ್ಯಕ್ರಮ ನಿರೂಪಿಸಿದರು.
ಎಬಿವಿಪಿ ತಾಲೂಕು ಸಂಚಾಲಕ ಅಭಿಷೇಕ್ ಸುವರ್ಣ, ಇಕ್ಬಾಲ್ ಅಹಮದ್, ಶೇಖರ್ ಎಚ್., ವಸಂತ್ ಎಮ್., ರಮಿತಾ ಶೈಲೇಂದ್ರ, ಗಣೇಶ್ ಸಾಲಿಯಾನ್, ಶೈಲೇಂದ್ರ ರಾವ್, ಗಣೇಶ್ ಜಾಲ್ಸೂರ್, ಮನೀಶ್, ವಿವೇಕ್ ಮುಂತಾದವರು ಉಪಸ್ಥಿತರಿದ್ದರು.