ಬೆಂಗಳೂರು: ರಾಜ್ಯದಲ್ಲಿ ಇಂದೂ ಕೂಡ ಕೋವಿಡ್-19 ಪಾಸಿಟಿವ್ ಪ್ರಕರಣ ಸಾವಿರದ ಗಡಿ ದಾಟಿದ್ದು ಇದು ಮೂರನೇ ಅಲೆಯ ಮುನ್ಸೂಚನೆಯೇ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.
ಹಲವಾರು ತಿಂಗಳ ನಂತರ ರಾಜ್ಯದಲ್ಲಿ 150-200 ರ ಒಳಗೆ ಕಂಡುಬರುತ್ತಿದ್ದ ಪಾಸಿಟಿವ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಸತತ ಎರಡನೆಯ ದಿನವೂ ಸಾವಿರ ದಾಟಿರುವುದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿಂದು 1187 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಬೆಂಗಳೂರು ನಗರದಲ್ಲಿ ಅತ್ಯಧಿಕ 923 ಪ್ರಕರಣಗಳು ಪತ್ತೆಯಾಗಿದ್ದು, ಎರಡನೆ ಅತಿ ಹೆಚ್ಚು ಪ್ರಕರಣ ದಕ್ಷಿಣ ಕನ್ನಡದಲ್ಲಿ (63) ಕಂಡುಬಂದಿದ್ದು ನಂತರದ ಸ್ಥಾನದಲ್ಲಿ ಉಡುಪಿ (54) ಜಿಲ್ಲೆ ಇದೆ.
ರಾಜ್ಯದಲ್ಲಿ 6 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 8 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದ್ದು ರಾಜ್ಯದಲ್ಲಿ 10,292 ಸಕ್ರಿಯ ಪ್ರಕರಣಗಳಿವೆ.
ವಿಶೇಷ ಸೂಚನೆ: ಮನೆಯಿಂದ ಹೊರಗಡೆ ಹೋಗುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಿ, ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ, ಲಸಿಕೆ ಪಡೆಯದವರನ್ನು ಲಸಿಕೆ ಪಡೆಯುವಂತೆ ಮನವೊಲಿಸಿ, ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ.