Monday, November 25, 2024
Monday, November 25, 2024

2022ರ ಖಗೋಳ ವಿದ್ಯಮಾನಗಳು; ಈ ವರ್ಷ ನಮಗೆ ಎರಡು ಗ್ರಹಣಗಳು

2022ರ ಖಗೋಳ ವಿದ್ಯಮಾನಗಳು; ಈ ವರ್ಷ ನಮಗೆ ಎರಡು ಗ್ರಹಣಗಳು

Date:

ಸೂರ್ಯಾಸ್ತ ಹಾಗೂ ಚಂದ್ರೋದಯಗಳಲ್ಲಿ ಗ್ರಹಣ: ಈ ವರ್ಷದ ಎರಡು ಗ್ರಹಣಗಳು ಭಾರತೀಯರಿಗೆ. ಅಕ್ಟೋಬರ್ 25 ರ ದೀಪಾವಳಿ ಅಮಾವಾಸ್ಯೆಯಂದು ಪಾರ್ಶ್ವ ಸೂರ್ಯ ಗ್ರಹಣವಾದರೆ, ಮುಂದಿನ ನವಂಬರ್ 8 ರ ಕಾರ್ತೀಕ ಹುಣ್ಣಿಮೆಯಂದು ಪಾರ್ಶ್ವ ಚಂದ್ರಗ್ರಹಣ. ವಿಶೇಷವೆಂದರೆ, ಸೂರ್ಯ ಗ್ರಹಣದಲ್ಲಿ, ಗ್ರಹಣದ ಸೂರ್ಯ ಗ್ರಹಣವಿರುವತ್ತಾ ಅಸ್ತಂಗತನಾದರೆ, ಚಂದ್ರ ಗ್ರಹಣದಲ್ಲಿ ಗ್ರಹಣದ ಚಂದ್ರನ ಚಂದ್ರೋದಯ.

ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆಯಾದರೂ, ಭಾರತಕ್ಕೆ ಎರಡೇ ಗೋಚರ. ಅಕ್ಟೋಬರ್ 25ರ ಪಾರ್ಶ್ವ ಸೂರ್ಯ ಗ್ರಹಣ ಹಾಗೂ ನವಂಬರ್ 8ರ ಪಾರ್ಶ್ವ ಚಂದ್ರ ಗ್ರಹಣ. ಆಕ್ಟೋಬರ್ 25 ರ ಪಾರ್ಶ್ವ ಸೂರ್ಯ ಗ್ರಹಣ ದಂದು ಸಂಜೆ 5 ಗಂಟೆ 08 ನಿಮಿಷಕ್ಕೆ ಗ್ರಹಣ ಪ್ರಾರಂಭ. 5 ಗಂಟೆ 50 ನಿಮಿಷಕ್ಕೆ ಅತೀ ಹೆಚ್ಚೆಂದರೆ ಸುಮಾರು 25 ಅಂಶ ಗ್ರಹಣ. 6 ಗಂಟೆ 28 ನಿಮಿಷಕ್ಕೆ ಅಂತ್ಯ. ಆದರೆ 6 ಗಂಟೆ 6 ನಿಮಿಷಕ್ಕೆ ಸೂರ್ಯಾಸ್ತ. ಹಾಗಾಗಿ ಗ್ರಹಣ ಸೂರ್ಯ ಅಸ್ತಂಗತ.

ಜಾಹೀರಾತು

ನವಂಬರ್ 8ರಂದು ಮದ್ಯಾಹ್ನ 3 ಗಂಟೆ 46 ನಿಮಿಷಕ್ಕೆ ಖಗ್ರಾಸ ಪ್ರಾರಂಭವಾಗಿ 5 ಗಂಟೆ 11ನಿಮಿಷಕ್ಕೆ ಖಗ್ರಾಸ ಅಂತ್ಯ ತದನಂತರ ಪಾರ್ಶ್ವ ಗ್ರಹಣ. ಉಡುಪಿಯವರಿಗೆ 6 ಗಂಟೆಗೆ ಚಂದ್ರೋದಯ. ಸುಮಾರು 25 ಅಂಶ ಗ್ರಹಣ ಗೊಂಡ ಚಂದ್ರೋದಯ. 6 ಗಂಟೆ 19 ನಿಮಿಷಕ್ಕೆ ಗ್ರಹಣ ಅಂತ್ಯ. ಇನ್ನೆರಡು ಗ್ರಹಣಗಳು ಈ ವರ್ಷ ಸಂಭವಿಸಲಿವೆಯಾದರೂ ಭಾರತದಲ್ಲಿ ಗೋಚರವಿಲ್ಲ. ಅವು ಎಪ್ರಿಲ್ 30ರ ಪಾರ್ಶ್ವ ಸೂರ್ಯಗ್ರಹಣ ಹಾಗೂ ಮೇ 16 ರ ಸಂಪೂರ್ಣ ಚಂದ್ರ ಗ್ರಹಣ.

ಗ್ರಹಗಳು: ಯಾವಾಗಲೂ ರಾತ್ರಿ ಆಕಾಶದಲ್ಲಿ ಕಾಣ ಸಿಗದ ಬುಧ ಗ್ರಹ ಕೆಲವೇ ದಿನ ಬರೇ 45 ನಿಮಿಷ ಕಾಣ ಸಿಗುವುದು. ಈ ವರ್ಷ ಸಂಜೆಯ ಸೂರ್ಯಾಸ್ತದ ನಂತರ ಪಶ್ಚಿಮ ಆಕಾಶದಲ್ಲಿ ಜನವರಿ 7, ಎಪ್ರಿಲ್ 29, ಆಗಸ್ಟ್ 27, ಡಿಸೆಂಬರ್ 21 ರಂದು ಕಂಡರೆ, ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುಂಚೆ ಫೆಬ್ರವರಿ 16, ಜೂನ್ 16 ಅಕ್ಟೋಬರ್ 8, ಕಾಣಲಿದೆ.

ಶುಕ್ರ ಗ್ರಹ ಈ ವರ್ಷ ಸಂಜೆಯ ಆಕಾಶದಲ್ಲಿ ಕಾಣಬೇಕಾದರೆ ಅಕ್ಟೋಬರ್ ಅಂತ್ಯದ ವರೆಗೆ ಕಾಯಬೇಕು. ಅಲ್ಲಿಯ ವರೆಗೆ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಮಾತ್ರ ಹೊಳೆಯಲಿದೆ. ಸುಮಾರು ಎರಡು ವರ್ಷ 50 ದಿನಗಳಿಗೊಮ್ಮೆ ಭೂಮಿಗೆ ಸಮೀಪಿಸುವ ಮಂಗಳ ಗ್ರಹ ಡಿಸೆಂಬರ್ 8 ರಂದು ಬಹಳ ಸುಂದರವಾಗಿ ಕಾಣಲಿದೆ. (Opposition of Mars on Dec 8.)

ವರ್ಷಕ್ಕೊಮ್ಮೆ ಒಂದು ತಿಂಗಳು ದೊಡ್ಡದಾಗಿ ಚೆನ್ನಾಗಿ ಕಾಣುವ ಗುರು ಹಾಗೂ ಶನಿಗ್ರಹಗಳು ಈ ವರ್ಷ ಆಗಸ್ಟ್ ನಲ್ಲಿ ಶನಿ (Saturn opposition on August 14) ಹಾಗೂ ಸೆಪ್ಟೆಂಬರ್ ನಲ್ಲಿ ಗುರು (Jupiter’s opposition on September 26) ಇಡೀ ರಾತ್ರಿ ಕಾಣಲಿವೆ.

ಈ ವರ್ಷದ ಮೂರು ಹುಣ್ಣಿಮೆಗಳು ಸೂಪರ್ ಮೂನ್ ಗಳು. ಜೂನ್ 14, ಜುಲೈ 13 ಹಾಗೂ ಆಗಸ್ಟ್ 12. ಈ ಹುಣ್ಣಿಮೆ ಚಂದ್ರ, ನೋಡಲು ಬಲು ಚೆಂದ.

ಡಾ. ಎ. ಪಿ. ಭಟ್, ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!