ಶಿರ್ವ: ಇಂದು ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಕಂಪ್ಯೂಟರ್ ತಂತ್ರಾಂಶವನ್ನು ವಿನ್ಯಾಸಗೊಳಿಸಿ ವಿವಿಧ ಅಪ್ಲಿಕೇಶನ್ಗಳನ್ನು ರೂಪಿಸುವಲ್ಲಿ ಪೈತನ್ ಪ್ರೋಗ್ರಾಮ್ ಒಂದು ವಿಶಿಷ್ಟತೆಯನ್ನು ಹೊಂದಿದೆ ಎಂದು ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ನಾಗರಾಜ್ ಭಟ್ ಹೇಳಿದರು.
ಅವರು ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಪರಸ್ಪರ ಒಡಂಬಡಿಕೆಯ ಅನ್ವಯ ಇಂದು ಕಾಲೇಜಿನ ದೃಶ್ಯ-ಶ್ರಾವ್ಯ ಕೊಠಡಿಯಲ್ಲಿ ಏರ್ಪಡಿಸಿದ ಒಂದು ದಿನದ ಪೈತಾನ್ ಪ್ರೋಗ್ರಾಮಿಂಗ್ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ಮಾರ್ಟ್ ಫೋನ್ ಅಂತಹ ಸಾಧನೆಗಳನ್ನು ಪ್ರತಿಯೊಬ್ಬರು ಸುಲಭವಾಗಿ ಸದ್ಬಳಕೆ ಮತ್ತು ಸಮರ್ಪಕ ಕಾರ್ಯನಿರ್ವಹಣೆ ಮಾಡಲು ಇಂತಹ ತಾಂತ್ರಿಕತೆ ಅಗತ್ಯವಾಗಿದೆ ಎಂದರು.
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶರತ್ ಕುಮಾರ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ, ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿಯನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ಮಾನವ ರೋಬೊ ರೂಪಿಸುವಲ್ಲಿ ಪೈತಾನ್ ಪ್ರೋಗ್ರಾಮಿಂಗ್ ಗಳನ್ನು ವಿಶಿಷ್ಟ ರೂಪದಲ್ಲಿ ಅಳವಡಿಕೆ ಮಾಡುತ್ತಿದ್ದಾರೆ.
ಕಂಪ್ಯೂಟರ್ ವಿದ್ಯಾರ್ಥಿಗಳು ಇಂತಹ ಜ್ಞಾನವನ್ನು ಕಲಿಯುವ ಮೂಲಕ ಉದ್ಯೋಗ ಕ್ಷೇತ್ರವನ್ನು, ಬದಲಾಗುತ್ತಿರುವ ತಂತ್ರಾಂಶವನ್ನು ಅರ್ಥಮಾಡಿಕೊಳ್ಳುವುದು ಇಂದು ಅತ್ಯಗತ್ಯವಾಗಿದೆ ಎಂದರು.
ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೊದಲಾದ ಆಧುನಿಕ ತಂತ್ರಾಂಶವನ್ನು ರೂಪಿಸಲು ಸೈಂಟಿಸ್ಟ್ ಗಳು ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಗಳು ಹೆಚ್ಚಾಗಿ ಕಳೆದ ಎರಡು ದಶಕಗಳಲ್ಲಿ ಪೈಥಾನ್ ವಿಕಸನಗೊಂಡಂತೆ ಅಳವಡಿಕೆಯ ಜೊತೆಗೆ ಬಳಕೆಯ ಪ್ರಕರಣಗಳು ಬೆಳೆದಿವೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಪ್ರವೀಣ್ ಕುಮಾರ್ ಅವರು ತಮ್ಮ ಪ್ರಸ್ತಾವಿಕ ಮಾತುಗಳಲ್ಲಿ ಉಲ್ಲೇಖಿಸಿದರು.
ಉಪನ್ಯಾಸಕ ಪ್ರಕಾಶ್, ಸುಷ್ಮಾ, ದಿವ್ಯಶ್ರೀ, ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಎಸ್ಎಂವಿಐಟಿಎಂ ವಿದ್ಯಾರ್ಥಿಗಳಾದ ವೈಷ್ಣವಿ, ವಿಕ್ರಮ ಕಾಲೇಜಿನ ವಿದ್ಯಾರ್ಥಿಗಳಾದ ವರ್ಷಿತ್ ಶೆಟ್ಟಿ ಹಾಗೂ ವಿಧಾತ ಶೆಟ್ಟಿ ಸಹಕರಿಸಿದರು. ಶ್ರಾವ್ಯ ಪ್ರಾರ್ಥಿಸಿದರು.
ಪ್ರಿಯಾಂಕ ಸ್ವಾಗತಿಸಿ, ಮಾನಸಿ ಸಾಲಿಯಾನ್ ವಂದಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು.