ಉಡುಪಿ: ಭಾವಿ ಪರ್ಯಾಯ ಕೃಷ್ಣಾಪುರ ಮಠದ ಧಾನ್ಯ ಮುಹೂರ್ತವು ಕೃಷ್ಣಾಪುರ ಮಠದಲ್ಲಿ ನವಗ್ರಹ ಪೂಜೆಯೊಂದಿಗೆ ಆರಂಭಗೊಂಡು ಚಂದ್ರಮೌಳೇಶ್ವರ, ಅನಂತೇಶ್ವರ, ಶ್ರೀ ಕೃಷ್ಣ ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿ ಬಡಗುಮಾಳಿಗೆಯಲ್ಲಿ ಸಂಪನ್ನಗೊಂಡಿತು. ಶ್ರೀ ಮಠದ ಪುರೋಹಿತರಾದ ವೇ.ಮೂ.ಶ್ರೀನಿವಾಸ ಉಪಾಧ್ಯಾಯರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಶಾಸಕರು ಹಾಗೂ ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ, ಶ್ರೀ ಮಠದ ಶ್ರೀನಿವಾಸ ಭಟ್ ಪಡುಬಿದ್ರೆ, ವರದ ರಾವ್, ಸೀತಾರಾಮ ಭಟ್, ಕೊಟ್ಟಾರಿಗಳಾದ ರಾಘವೇಂದ್ರ ರಾವ್, ಕಟೀಲು ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಪ್ರಮುಖರಾದ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಶ್ರೀಪತಿ ಭಟ್ ಮೂಡುಬಿದ್ರೆ, ಬಾಲಾಜಿ ರಾಘವೇಂದ್ರ ಆಚಾರ್ಯ, ವಿದ್ವಾಂಸರಾದ ಹರಿದಾಸ ಭಟ್, ಶಿವಪ್ರಸಾದ್ ತಂತ್ರಿ, ಪದ್ಮನಾಭ ಭಟ್ ಕಿದಿಯೂರು, ಸಮಿತಿಯ ಶ್ರೀಶ ಆಚಾರ್ಯ, ರಾಘವೇಂದ್ರ ರಾವ್, ಲಕ್ಷ್ಮೀನಾರಾಯಣ್, ಜಯಪ್ರಕಾಶ್ ಕೆದ್ಲಾಯ, ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು ಹಾಗೂ ಮಠದ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.