Wednesday, October 16, 2024
Wednesday, October 16, 2024

ಬೈಂದೂರು ಪ.ಪಂಚಾಯತ್ ರಚನೆಗೆ ಕ್ಷೇತ್ರ ವಿಂಗಡಣೆ: ಆಕ್ಷೇಪಣೆ ಆಹ್ವಾನ

ಬೈಂದೂರು ಪ.ಪಂಚಾಯತ್ ರಚನೆಗೆ ಕ್ಷೇತ್ರ ವಿಂಗಡಣೆ: ಆಕ್ಷೇಪಣೆ ಆಹ್ವಾನ

Date:

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ಬೈಂದೂರು ಪಟ್ಟಣ ಪಂಚಾಯತ್ ರಚನೆಗೆ ಸಂಬಂಧಿಸಿದಂತೆ, 2011 ರ ಜನಗಣತಿಯ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡುವ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ಬೈಂದೂರು ಪಟ್ಟಣ ಪಂಚಾಯತ್‌ನ ಎಲ್ಲಾ 20 ವಾರ್ಡ್ಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡುವ ಪೂರ್ವದಲ್ಲಿ ಸಾರ್ವಜನಿಕರು ಸಲ್ಲಿಸಲ್ಪಡುವ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ವಾರ್ಡ್ಗಳ ಕ್ಷೇತ್ರ ವಿಂಡಣೆಯನ್ನು ಅಂತಿಮಗೊಳಿಸಬೇಕಾಗಿರುವುದರಿಂದ ಎಲ್ಲಾ ವಾರ್ಡ್ಗಳ ವ್ಯಾಪ್ತಿಯ ಪ್ರದೇಶವನ್ನು ಗಡಿ ಗುರುತುಗಳ ಸಮೇತ ಅಧಿಸೂಚನೆ ಹೊರಡಿಸಿರುತ್ತಾರೆ.

ಪ್ರತಿಯೊಂದು ವಾರ್ಡಿನ ಕ್ಷೇತ್ರದ ಗಡಿಗುರುತು, ಮನೆ ನಂಬ್ರ ಇತ್ಯಾದಿ ವಿವರಗಳು ಬೈಂದೂರು ಪಟ್ಟಣ ಪಂಚಾಯತ್ ಹಾಗೂ ತಾಲೂಕು ಕಛೇರಿಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮಗೆ ಬೇಕಾದ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಕ್ಷೇತ್ರ ವಿಂಗಡಣೆ ಕುರಿತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಥವಾ ಸಲಹೆ ಸೂಚನೆಗಳು ಇದ್ದಲ್ಲಿ ಡಿಸೆಂಬರ್ 22 ರ ಒಳಗೆ, ಸೂಕ್ತ ದಾಖಲೆ ಹಾಗೂ ಸಂಪೂರ್ಣ ವಿಳಾಸದೊಂದಿಗೆ ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ, ಬೈಂದೂರು ತಾಲೂಕು ಕಛೇರಿಗೆ ಹಾಗೂ ಪಟ್ಟಣ ಪಂಚಾಯತ್ ಕಛೇರಿಗೆ ಸಲ್ಲಿಸಬಹುದಾಗಿದೆ ಎಂದು ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೆಂಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆ

ಯು.ಬಿ.ಎನ್.ಡಿ., ಅ.15: ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು...

ಇಂಧನ ಇಲಾಖೆ: ಖಾಲಿ ಇರುವ 2,975 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭ

ಬೆಂಗಳೂರು, ಅ.15: ಇಂಧನ ಇಲಾಖೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ...

ಕಾವೇರಿ ತೀರ್ಥೋದ್ಭವ: ಪ್ಲಾಸ್ಟಿಕ್ ನಿಷೇಧ

ಮಡಿಕೇರಿ, ಅ.15: ಮಡಿಕೇರಿಯ ತಲಕಾವೇರಿಯಲ್ಲಿ ಅಕ್ಟೋಬರ್‌ 17ರಂದು ಬೆಳಗ್ಗೆ 7.40ಕ್ಕೆ ನಡೆಯಲಿರುವ...

ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಕ್ಷೇತ್ರಗಳ ಯಾತ್ರೆ

ಬೆಂಗಳೂರು, ಅ.15: ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ...
error: Content is protected !!