ಉಡುಪಿ: ಕೇಂದ್ರ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ, ಉಡುಪಿ ವತಿಯಿಂದ ನೀಡಲಾಗುವ ಜಿಲ್ಲಾ ಅತ್ಯುತ್ತಮ ಯುವ ಮಂಡಳ 2020-21 ನೇ ಸಾಲಿನ ಪ್ರಶಸ್ತಿಗೆ ಹೆಬ್ರಿ ತಾಲೂಕು ಕುಚ್ಚೂರು ಕುಡಿಬೈಲು ’ಶಾಂತಿನಿಕೇತನ ಯುವವೃಂದ (ರಿ.)’ ಆಯ್ಕೆಯಾಗಿರುತ್ತದೆ.
ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಹಾಗೂ ಪ್ರಶಂಸ ಪತ್ರವನ್ನು ಒಳಗೊಂಡಿದ್ದು, ಜನವರಿಯಲ್ಲಿ ನಡೆಯುವ ಜಿಲ್ಲಾಮಟ್ಟದ ಯುವ ಸಮಾವೇಶದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.