ಅಹಮದಾಬಾದ್: ಸಾಮಾಜಿಕ ಜಾಲತಾಣವೊಂದರಲ್ಲಿ ಬಂದ ವರ್ಕ್ ಫ್ರಾಮ್ ಹೋಮ್ ಜಾಹೀರಾತಿಗೆ ಸ್ಪಂದಿಸಿದ ಉದ್ಯೋಗಸ್ಥ ಮಹಿಳೆ 95 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಚಾಂದ್ಖೇಡದಲ್ಲಿ ನಡೆದಿದೆ.
ಖಾಸಗಿ ಬ್ಯಾಂಕ್ ಒಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ರುತ್ವಾ ವ್ಯಾಸ್ (26) ಎಂಬ ಮಹಿಳೆ ವಂಚನೆಗೆ ಒಳಗಾಗಿದ್ದಾರೆ.
ವ್ಯವಸ್ಥಿತವಾಗಿ ನಡೆದಿತ್ತು ವಂಚನೆ: ಅಕ್ಟೋಬರ್ 4ರಂದು ಫೇಸ್ಬುಕ್ ನಲ್ಲಿ ಜಾಹೀರಾತು ನೋಡಿದ ರುತ್ವಾ ವ್ಯಾಸ್ ಸಂಬಂಧಪಟ್ಟ ವ್ಯಕ್ತಿಯನ್ನು ಸಂಪರ್ಕಿಸಿದರು. ಎರಿನ್ ಬರ್ಡ್ ಎಂಬ ವ್ಯಕ್ತಿ ಮೊದಲು ಈಕೆಗೆ 1000 ರೂಪಾಯಿ ಪಾವತಿಸಲು ಹೇಳಿದ. ನಿಯೋಜಿಸಿದ ಕಾರ್ಯ ಮುಗಿಸಿದ ತಕ್ಷಣ ಈಕೆಗೆ 1452 ರೂಪಾಯಿ ಪಾವತಿಸಲಾಯಿತು.
ಕೆಲವು ದಿನಗಳ ನಂತರ 3000 ರೂಪಾಯಿ ಡೆಪಾಸಿಟ್ ಮಾಡಲು ಹೇಳಿ ಈಕೆಗೆ ಮತ್ತೊಂದು ಕಾರ್ಯ ನಿಯೋಜಿಸಲಾಯಿತು. ಕೊಟ್ಟ ಕೆಲಸ ಮುಗಿಸಿದ ತಕ್ಷಣ ಈಕೆಯ ಖಾತೆಗೆ 4186 ರೂಪಾಯಿ ಪಾವತಿ ಆಯ್ತು.
ಮೂರನೇ ಕಾರ್ಯಕ್ಕಾಗಿ 25 ಸಾವಿರ ಪಾವತಿಸಲು ಸೈಬರ್ ವಂಚಕರು ಹೇಳಿದಾಗ ತಕ್ಷಣ ಈಕೆ ಮೊತ್ತವನ್ನು ಪಾವತಿಸಿದಾಗ ಅದು ಬ್ಲಾಕ್ ಆದಾಗ, ಸೈಬರ್ ವಂಚಕರು ಮತ್ತೊಮ್ಮೆ 75 ಸಾವಿರ ಕಂತುಗಳಲ್ಲಿ ಪಾವತಿಸಲು ಹೇಳಿದಾಗ ದೊಡ್ಡ ಮೊತ್ತದ ಆಮಿಷಕ್ಕೆ ಈಕೆ ಪಾವತಿಸೆಯೇ ಬಿಟ್ಟಳು. ತಕ್ಷಣ ಆ ವ್ಯಕ್ತಿ ತನ್ನೆಲ್ಲಾ ಸಂವಹನವನ್ನು ಸ್ಥಗಿತಗೊಳಿಸಿದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಇದೇ ರೀತಿಯ ಹಣ ವಸೂಲಿ ದಂಧೆಯನ್ನು ದೆಹಲಿ ಪೊಲೀಸರು ಕೆಲವೇ ದಿನಗಳ ಹಿಂದೆ ಬೇಧಿಸಿ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು.