ಕೋಟ: ಕೊರೊನಾ ಸಂದಿಗ್ಧ ಸಮಯದಲ್ಲಿ ತಮ್ಮ ಜೀವನದ ಹಂಗು ತೊರೆದು ನಾಗರಿಕರ ಬಗ್ಗೆ ಆಶಾಕಾರ್ಯಕರ್ತೆಯರು ತೋರಿದ ಕಾಳಜಿ ಅಮೂಲ್ಯವಾದುದು. ಅವರ ಈ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸರಕಾರ ಅವರ ಜೀವಾನೋಪಾಯಕ್ಕೆ ಭದ್ರತೆ ನೀಡಬೇಕು, ಅಲ್ಲದೇ ಸಮಾಜದ ಒಳಿತಿಗಾಗಿ ಅವರ ತ್ಯಾಗ ಪರಿಶ್ರಮವನ್ನು ಸಮಾಜ ಗುರುತಿಸಬೇಕು ಎಂದು ಸ್ವಾಗತ್ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಹೇಳಿದರು.
ಅವರು ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಬಾರ್ಕೂರು ಇದರ ಸಾಯ್ಬ್ರಕಟ್ಟೆ ಶಾಖೆ ಹಾಗೂ ಯುವವಾಹಿನಿ (ರಿ.) ಯಡ್ತಾಡಿ ಘಟಕದ ವತಿಯಿಂದ ಕೊರೊನಾ ವಾರಿಯರ್ಸ್ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
17 ಆಶಾ ಕಾರ್ಯಕರ್ತೆಯರನ್ನು ಹಾಗೂ ಪಿಗ್ಮಿ ಸಂಗ್ರಹಕಾರದ ಕೆ.ಪಿ ಕೋಟಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸ್ವಾಗತ್ ವಿವಿಧೊದ್ದೇಶ ಸಹಕಾರಿ ಸಂಘ ಹಾಗೂ ಯುವವಾಹಿನಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.