ಉಡುಪಿ: ಉದ್ಯಮಶೀಲತಾ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಲು, ಪ್ರತಿ ತಾಲೂಕಿಗೆ ಓರ್ವರಂತೆ 7 ತಾಲೂಕು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾಗಿದೆ. ದಿನಾಂಕ: 23.11.2021 ರಂದು ಈ ಕುರಿತು ತಾಲೂಕು ಪಂಚಾಯತ್ ಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ 5 ಮಂದಿ ಗೆ ಸಂದರ್ಶನ ನಡೆಸಿ ತಾಲೂಕಿಗೆ ಓರ್ವರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಅರ್ಹತೆಗಳು:
1. ಸಂಜೀವಿನಿ ಸ್ವ ಸಹಾಯ ಸಂಘ ದ ಸದಸ್ಯೆಯಾಗಿರಬೇಕು. ಅಥವಾ ಸಂಜೀವಿನಿ ಸ್ವ ಸಹಾಯ ಸಂಘದ ಸದಸ್ಯೆಯ ಮಗಳು ಅಥವಾ ಸೊಸೆ ಅರ್ಜಿ ಸಲ್ಲಿಸಲು ಅರ್ಹತೆ ಇದೆ.
2. ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
3. ವಯೋಮಿತಿ 21 ರಿಂದ 35.
4. ತಿಂಗಳಲ್ಲಿ 20 ದಿನ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕ್ಷೇತ್ರ ಭೇಟಿ ಮಾಡಿ ಸೇವೆ ಸಲ್ಲಿಸಲು ತಯಾರಿರ ಬೇಕು.
5. ದಿನಕ್ಕೆ 250ರೂ. ಗೌರವ ಧನ ನೀಡಲಾಗುವುದು.
ಆಸಕ್ತರು ಕೂಡಲೇ, ಸಂಬಂಧಪಟ್ಟ ತಾಲೂಕು ಪಂಚಾಯತ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನವ್ಯ, ಜಿಲ್ಲಾ ವ್ಯವಸ್ಥಾಪಕರು, ಎನ್.ಆರ್.ಎಲ್.ಎಮ್ ಸಂಜೀವಿನಿ ಜಿಲ್ಲಾ ಪಂಚಾಯತ್, ಉಡುಪಿ 9686123850