ಉಡುಪಿ: ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಅರಿವನ್ನು ಮೂಡಿಸುವ ಸಲುವಾಗಿ ಮಕ್ಕಳ ದಿನಾಚರಣೆಯ ಭಾರತದಲ್ಲಿ ಆಚರಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ದಿನದ ಸಡಗರಕ್ಕೆ ಇನ್ನಷ್ಟು ರಂಗು ತರಲಾಗುತ್ತದೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಪು ವಲಯಾಧ್ಯಕ್ಷ ವಿನೋದ್ ಕಾಂಚನ್ ಹೇಳಿದರು.
ಅವರು ಉಡುಪಿ ವಲಯದ ವತಿಯಿಂದ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.
ಇನ್ನೋರ್ವ ಅತಿಥಿ ರಾಮಚಂದ್ರ ಉಪಾಧ್ಯಾಯ ಮಾತನಾಡಿ, ಸಮಾಜದಲ್ಲಿನ ಆಗುಹೋಗುಗಳ ದಾಖಲೀಕರಣದ ರೂವಾರಿಗಳಾದ ಛಾಯಾಚಿತ್ರಗಾರರು ಈ ವಿದ್ಯಾರ್ಥಿಗಳ ಉಚಿತ ಮಾಡೆಲಿಂಗ್ ಫೋಟೋಗ್ರಫಿ ಮಾಡಿರುವುದು ವಿಶೇಷ ಎಂದು ಹೇಳಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಯುವ ಪ್ರತಿಭೆ ಸ್ಮಿತಾ ಎಸ್ ಬಿಯವರನ್ನು ಅಭಿನಂದಿಸಿ ಗೌರವಿಸಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಸುಷ್ಮಾ ರತನ್ ಶೆಟ್ಟಿ ನೆರವೇರಿಸಿದರು. ಮಕ್ಕಳ ಮಾಡೆಲಿಂಗ್ ಫೋಟೋಗ್ರಫಿಯನ್ನು ಖ್ಯಾತ ಛಾಯಾಚಿತ್ರ ಕಲಾವಿದ ಸಂದೀಪ್ ಕಾಮತ್ ನೆರವೇರಿಸಿದರು.
ಉಪಾಧ್ಯಕ್ಷ ಸುರಭಿ ಸುದೀರ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸುರಭಿ ರತನ್, ಭಕ್ತಿಕಾ ರತನ್ ಉಪಸ್ಥಿತರಿದ್ದರು.
ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೊರೆಯ ಧನ್ಯವಾದವಿತ್ತರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು. ಬಳಿಕ ಸಹಭೋಜನ ನಡೆಯಿತು.