ಮುಂಬಯಿ: ಮುಖೇಶ್ ಅಂಬಾನಿಯ ಆಂಟಿಲಿಯಾ ಬಂಗಲೆಯ ಸುತ್ತ ಬಿಗಿ ಭದ್ರತೆ ಹೆಚ್ಚಿಸಲಾಗಿದ್ದು ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಮುಂಬೈ ಪೊಲೀಸರಿಗೆ ಇಂದು ಟ್ಯಾಕ್ಸಿ ಚಾಲಕನಿಂದ ಕರೆ ಬಂದ ನಂತರ ಮುಖೇಶ್ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬ್ಯಾಗ್ ಹೊತ್ತ ಇಬ್ಬರು ಅಂಬಾನಿ ನಿವಾಸವನ್ನು ಕೇಳಿದ್ದರು ಎಂದು ಟ್ಯಾಕ್ಸಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಉದ್ಯಮಿಯ ಮನೆಯ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಟ್ಯಾಕ್ಸಿ ಚಾಲಕನಿಂದ ನಮಗೆ ಕರೆ ಬಂದಿದ್ದು, ಇಬ್ಬರು ಬ್ಯಾಗ್ ನೊಂದಿಗೆ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾವನ್ನು ಕೇಳಿದ್ದಾರೆ ಎಂದು ಚಾಲಕ ಹೇಳಿಕೆ ನೀಡಿದ್ದಾರೆ.
ಡಿಸಿಪಿ ಮಟ್ಟದ ಅಧಿಕಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.