ಉಡುಪಿ: ಸಾಮಾಜಿಕ ಸಾಮರಸ್ಯ ಉಡುಪಿ ಮತ್ತು ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆದ ‘ತುಡರ್’ ಕಾರ್ಯಕ್ರಮ ಇಂದು ರಾಜಾಂಗಣದಲ್ಲಿ ನಡೆಯಿತು. ಸಾಮಾಜಿಕವಾಗಿ ಹಿಂದುಳಿದ ಸುಮಾರು 50 ಮನೆಗಳ ಸದಸ್ಯರೊಂದಿಗೆ ಸಹಭೋಜನ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಪರ್ಯಾಯ ಮಠದ ಕಡೆಯಿಂದ ಮನೆಗಳಿಗೆ ಶ್ರೀ ಕೃಷ್ಣನ ಭಾವಚಿತ್ರ, ದೀಪಾವಳಿ ಆಚರಣೆಗೆ ಹಣತೆ, ತುಳಸಿಮಾಲೆ ಮತ್ತು ಕೃಷ್ಣ ಪ್ರಸಾದವನ್ನು ವಿತರಿಸಲಾಯಿತು.
ಡಾ. ವಾದಿರಾಜ್ ಮಣಿಪಾಲ ಪ್ರಸ್ತಾವನೆಗೈದರು, ಸಾಮರಸ್ಯ ಗತಿವಿಧಿಯ ಸಂಯೋಜಕರಾದ ರವಿ ಅಲೆವೂರು ಕಾರ್ಯಕ್ರಮವನ್ನು ನಿರ್ವಹಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಸಂಘ ಚಾಲಕರಾದ ಡಾ. ನಾರಾಯಣ್ ಶೆಣೈ, ನಗರ ಸಂಘ ಚಾಲಕರಾದ ರಾಮಚಂದ್ರ ಸನಿಲ್, ಹಿರಿಯ ಪ್ರಚಾರಕರಾದ ದಾ. ಮ. ರವೀಂದ್ರ, ಮಠದ ವ್ಯವಸ್ಥಾಪಕ ಗೋವಿಂದರಾಜ್ ಮುಂತಾದವರು ಉಪಸ್ಥಿತರಿದ್ದರು.
ಸಾಮಾಜಿಕ ಸಾಮರಸ್ಯ ಉಡುಪಿ ಜಿಲ್ಲೆಯ ಆಶ್ರಯದಲ್ಲಿ ಬೀಡಿನಗುಡ್ಡೆಯಲ್ಲಿ ನಡೆದ ‘ತುಡರ್’ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಮಠಾಧೀಶರು ಆಗಮಿಸಿ ಆಶೀರ್ವಚನ ನೀಡಿದರು. ದೀಪಾವಳಿಯ ಪ್ರಯುಕ್ತ ಕೆಲವು ಮನೆಗಳಿಗೆ ಭೇಟಿ ನೀಡಿ ದೀಪ ಬೆಳಗಿಸಿ ಆಚರಣೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಸಾಮರಸ್ಯ ಗತಿವಿಧಿಯ ಪ್ರಮುಖರಾದ ರವಿ ಅಲೆವೂರು, ನಗರಸಭಾ ಸದಸ್ಯರಾದ ಗೀತಾ ಶೇಟ್, ನವೀನ್, ಅಜಿತ್ ಪೈ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.