ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ 20ನೇ ವಾರ್ಷಿಕ ಮಹಾಸಭೆಯು ಶ್ರೀ ನರಸಿಂಹ ಸಭಾಭವನ ನರಸಿಂಗೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
2020-21 ರ ಸಾಲಿನ ಅಂತ್ಯಕ್ಕೆ ಪಾಲು ಬಂಡವಾಳ ರೂ 1.55 ಕೋಟಿ, ಠೇವಣಿ ರೂ 73.30 ಕೋಟಿ ಸಾಲಗಳು ರೂ 52.53 ಕೋಟಿ ಒಟ್ಟು ವ್ಯವಹಾರ 260 ಕೋಟಿ ನಡೆಸಿ ರೂ 1.45 ಕೋಟಿ ನಿವ್ವಳ ಲಾಭ ಗಳಿಸಿ ಶೇ 10 ಲಾಭಾಂಶ ವಿತರಿಸಿತು.
ಆರ್.ಎಸ್.ಬಿ ಸಂಘ ಮಣಿಪಾಲ ಇದರ ವಿದ್ಯಾರ್ಥಿನಿಲಯಕ್ಕೆ ಅಡುಗೆ ಪರಿಕರಗಳನ್ನು ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಶೇ 90 ಯಾ ಅಧಿಕ ಅಂಕಗಳಿಸಿದ ಮತ್ತು ಪಿ.ಯು.ಸಿ ಯಲ್ಲಿ ಶೇ 80 ಯಾ ಅಧಿಕ ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ಮುಖ್ಯ ಕಾರ್ಯನಿರ್ವಣಾಧಿಕಾರಿ ನಿತ್ಯಾನಂದ ನರಸಿಂಗೆ ವರದಿ ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷರಾದ ಶ್ರೀ ಪಾಂಡುರಂಗ ಕಾಮತ್ ಸ್ವಾಗತಿಸಿ, ನಿರ್ದೇಶಕ ನರಸಿಂಹ ನಾಯಕ್ ವಂದಿಸಿದರು. ಸುಧಾಕರ್ ನಾಯಕ್ ಮತ್ತು ನಾಗರಾಜ್ ನಾಯಕ್ ನಿರೂಪಿಸಿದರು
ವಿಂಶತಿ ಸಂಭ್ರಮದ ಪ್ರಯುಕ್ತ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಯಕ್ಷಲೋಕ ವಿಜಯ ಪ್ರದರ್ಶನಗೊಂಡಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಪ್ರಯುಕ್ತ ತೀರ್ಥಳ್ಳಿ ಗೋಪಾಲ ಆಚಾರ್ಯರನ್ನು ಗೌರವಿಸಿ ಅಭಿನಂದಿಸಲಾಯಿತು.
ಸಂಸ್ಥೆಯ ನಿರ್ದೇಶಕರುಗಳಾದ ರಾಮಕೃಷ್ಣ ನಾಯಕ್ ಬಿ ಪರ್ಕಳ, ಎನ್.ಸದಾನಂದ ನಾಯಕ್ ಹೆರ್ಗ, ನರಸಿಂಹ ನಾಯಕ್ ಮಣಿಪಾಲ, ಮಹೇಶ್ ನಾಯಕ್ ಅಂಬಲಬೆಟ್ಟು, ರವೀಂದ್ರ ಪಾಟ್ಕರ್ ಬಂಟಕಲ್ಲು, ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಗಣಪತಿ ನಾಯಕ್ ಪರ್ಕಳ, ಗಣಪತಿ ಪ್ರಭು ಕುಕ್ಕೆಹಳ್ಳಿ, ಜಯಂತಿ ನಾಯಕ್ ಪರ್ಕಳ, ರೂಪ ನಾಯಕ್ ಪರ್ಕಳ ಉಪಸ್ಥಿತರಿದ್ದರು.