ನವದೆಹಲಿ: ಮೇಲಿಂದ ಮೇಲೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಿಸಿಯಿಂದ ಜನತೆ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಆಘಾತ ಎದುರಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸಿಲಿಂಡರ್ ಒಂದಕ್ಕೆ 266 ರೂಪಾಯಿ ಹೆಚ್ಚಳ ಮಾಡಲಾಗಿದ್ದು ಇನ್ನು ಮುಂದೆ ನವದೆಹಲಿಯಲ್ಲಿ ಸಿಲಿಂಡರ್ ಬೆಲೆ ಎರಡು ಸಾವಿರ ರೂಪಾಯಿ ಐವತ್ತು ಪೈಸೆಗೆ ಮಾರಾಟವಾಗಲಿದೆ. ಈ ಹಿಂದೆ 19 ಕೆಜಿ ಸಿಲಿಂಡರ್ ಬೆಲೆ 1733 ಇತ್ತು.
ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿಲ್ಲ.