ಮಂಗಳೂರು: ಡಾ. ಅಶೋಕ್ ಶೆಟ್ಟಿ ಬಿ. ಯನ್ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಡಾ. ಅಶೋಕ್ ಶೆಟ್ಟಿ ಬಿ. ಯನ್ ಅವರು ಪತ್ರಕರ್ತ, ನಾಟಕಕಾರ, ಸಂಘಟಕರಾಗಿದ್ದು ಸಮಾಜ ಸೇವಕರಾಗಿ ಗುರುತಿಕೊಂಡಿದ್ದಾರೆ.
ಮಂಗಳೂರು ಟೌನ್ ಹಾಲ್ ನಲ್ಲಿ 11 ಸೌಹಾರ್ದ ಸಂಗಮ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ 1 ಸೌಹಾರ್ದ ಸಂಗಮಗಳನ್ನು ಯಶಸ್ವಿಯಾಗಿ ಸಂಘಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 300ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದರು.
10 ನಾಟಕಗಳನ್ನು ಬರೆದು ನಿರ್ದೇಶಿದ್ದರು. ಅವರ ’ಅಮ್ಮ ಕನ್ನಡ’ ನಾಟಕಕ್ಕೆ ಉಡುಪಿ ರಂಗಭೂಮಿ 1999ರಲ್ಲಿ ಸಂಘಟಿಸಿದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಮೆಚ್ಚುಗೆ ಪ್ರಶಸ್ತಿ ದೊರಕಿದೆ. ವಂದೇಮಾತರಂ ನೃತ್ಯ ಮೂಲಕವು ಜನಪ್ರಿಯರಾಗಿದ್ದ ಅವರ ಒಂಜಪ್ಪೆ ನಾಟಕವೂ ಸೂಪರ್ ಹಿಟ್ ಆಗಿತ್ತು ಮತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅವರಿಗೆ ಕಳೆದ ಫೆಬ್ರವರಿಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ದೊರಕಿದೆ.
ಮಂಗಳೂರು ನೆಹರು ಮೈದಾನದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.