ಮಣಿಪಾಲ: ರಾಷ್ಟೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಪೋಷಣಕ್ಕಾಗಿ ಆಯುರ್ವೇದ ಎನ್ನುವ ಶೀರ್ಷಿಕೆಯಡಿಯಲ್ಲಿ ಮಣಿಪಾಲದ ಮುನಿಯಾಲ್ ಆಯುರ್ವೇದ ಸಂಸ್ಥೆಯು ನವೆಂಬರ್ 2ರಂದು ಧನ್ವಂತರಿ ಜಯಂತಿಯಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಆಯುರ್ವೇದದಲ್ಲಿ ಹೇಳಿದ ವಿವಿಧ ಪಥ್ಯಾಹಾರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಬೆಳಿಗ್ಗೆ 10ರಿಂದ 12.30ರವರೆಗೆ ಏರ್ಪಡಿಸಲಾಗಿದೆ. ವಿವಿಧ ರೋಗಗಳಲ್ಲಿ ಪಥ್ಯವಾಗಿ ಬಳಸಬಹುದಾದ ಸುಲಭವಾಗಿ ತಯಾರಿಸಲಾಗುವ ಆಹಾರದ ಬಗ್ಗೆ ಮಾಹಿತಿ ನೀಡಲಾಗುವುದು. ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.