ಬ್ರಹ್ಮಾವರ: ಪದವೀಧರ ಶಿಕ್ಷಕರ ಸಿ ಆಂಡ್ ಆರ್ ಸರಿಪಡಿಸುವುದು, ನೂತನ ಪಿಂಚಣಿ ಯೋಜನೆ ರದ್ದುಪಡಿಸುವುದು, ಶಿಕ್ಷಕರ ವರ್ಗಾವಣೆ, ಮುಖ್ಯ ಶಿಕ್ಷಕರ 15, 20 25 ವೇತನ ಸಮಸ್ಯೆ, ದೈಹಿಕ ಶಿಕ್ಷಕರ ಸಮಸ್ಯೆ ಹೀಗೆ ಜ್ವಲಂತ ಸಮಸ್ಯೆ ಸರಿಪಡಿಸುವ ಬಗ್ಗೆ ರಾಜ್ಯ ಸಂಘದ ನಿರ್ದೇಶನದಂತೆ ತರಬೇತಿ ಬಹಿಷ್ಕಾರ, ಸಮಾಲೋಚನಾ ಸಭೆ ಬಹಿಷ್ಕಾರ ಹಾಗೂ ಸರಕಾರ ನಮ್ಮ ಸಮಸ್ಯೆಯನ್ನು ಶೀಘ್ರ ಸರಿಪಡಿಸದಿದ್ದರೆ ತರಗತಿ ಬಹಿಷ್ಕಾರ ಹೋರಾಟವನ್ನು ಕೈಗೊಳ್ಳುವ ಮೊದಲ ಹಂತ ಅಸಹಕಾರ ಚಳುವಳಿಯಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯ ಮುಂದೆ ಶಿಕ್ಷಕರ ವಿವಿಧ ಸಂಘಟನೆಯ ಬೆಂಬಲದೊಂದಿಗೆ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ವಲಯಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಹಾವಂಜೆ ಇವರ ಅಧ್ಯಕ್ಷತೆಯಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ತದನಂತರ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೂಲಕ ಶಿಕ್ಷಣ ಸಚಿವರು, ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರಿಗೆ ಹೋರಾಟದ ಮನವಿಯನ್ನು ನೀಡಲಾಯಿತು
ಕ.ರಾ.ಪ್ರಾ ಶಿ.ಸಂಘದ ಜಿಲ್ಲಾ ಅಧ್ಯಕ್ಷರರಾದ ಅಂಪಾರು ದಿನಕರ ಶೆಟ್ಟಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಕಿರಣ ಹೆಗ್ಡೆ, ಕ.ರಾ.ಸ ಎನ್ ಪಿ ಎಸ್ ನೌಕರ ಸಂಘದ ಜಿಲ್ಲಾ ಅಧ್ಯಕ್ಷರಾದ ರಾಘವ ಶೆಟ್ಟಿ, ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ರವಿ ಎಸ್ ಪೂಜಾರಿ, ಅನುದಾನಿತ ಪ್ರಾ ಶಾಲಾ ಶಿಕ್ಷಕರ ಸಂಘದ ತಾ.ಅಧ್ಯಕ್ಷರಾದ ಶಾಂತಾರಾಜ ಶೆಟ್ಟಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಸತೀಶ್ ಐತಾಳ್, ದೈಹಿಕ ಶಿಕ್ಷಕರ ಸಂಘದ ತಾ. ಅಧ್ಯಕ್ಷರಾದ ಸತಿಶ್ಚಂದ್ರ ಶೆಟ್ಟಿ, ಸಾವಿತ್ರಿ ಭಾಯಿ ಫುಲೆ ವಲಯ ಅಧ್ಯಕ್ಷರಾದ ಸೇಸು ಹಾಗೂ ಜಿಲ್ಲಾ ಮತ್ತು ತಾಲೂಕು ಸಂಘಟನೆಯ ಪದಾಧಿಕಾರಿಯವರು, ವಲಯದ ಶಿಕ್ಷಕರು ಭಾಗವಹಿಸಿದ್ದರು.