ಕುಂದಾಪುರ: ದಾವಣಗೆರೆಯ ಹರಿಹರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ನಾಗರಾಜ ಖಾರ್ವಿ ಬ್ರೆಸ್ಟ್ ಸ್ಟ್ರೋಕ್ 50 ಮೀ ಚಿನ್ನ, ಬ್ರೆಸ್ಟ್ ಸ್ಟ್ರೋಕ್ 100 ಮೀ ಚಿನ್ನ, ಬ್ರೆಸ್ಟ್ ಸ್ಟ್ರೋಕ್ 200 ಮೀ ಬೆಳ್ಳಿ, 50×4 ಮೆಡ್ಲೆ ರಿಲೇ ಕಂಚು, 100X4 ಫ್ರೀ ಸ್ಟೈಲ್ ರಿಲೇ ಕಂಚು ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿಯಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚುಗೋಡು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ, ಸರಸ್ವತಿ ವಿದ್ಯಾಲಯ ಗಂಗೊಳ್ಳಿಯ ಹಳೆ ವಿದ್ಯಾರ್ಥಿಯಾಗಿದ್ದಾರೆ.
ರೇಷ್ಮೆ ಇಲಾಖೆಯ ಇನ್ಸ್ಪೆಕ್ಟರ್ ಬಿ.ಕೆ.ನಾಯ್ಕ್ ಅವರು ತರಬೇತಿ ನೀಡಿರುತ್ತಾರೆ.
ನಾಗರಾಜ ಖಾರ್ವಿಯವರು ಈ ಹಿಂದೆ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಹಾಕಿ ಅರಬ್ಬಿ ಸಮುದ್ರದಲ್ಲಿ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಒಂದು ಕಿ.ಮೀ. ದೂರವನ್ನು ಅತ್ಯಂತ ವೇಗವಾಗಿ ಈಜಿ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುತ್ತಾರೆ.