ಗಂಗೊಳ್ಳಿ: ವ್ಯಕ್ತಿತ್ವದ ಬೆಳವಣಿಗೆ, ನಾಯಕತ್ವ ಗುಣ, ಕಲಿಕೆ, ಸಮಾಜದ ಆಗುಹೋಗುಗಳ ಬಗ್ಗೆ ಸ್ಪಂದಿಸುವ ಗುಣ, ಪರಿಸರ ಸಂರಕ್ಷಣೆ ಮುಂತಾದ ಸೃಜನಾತ್ಮಕ ಹವ್ಯಾಸಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ಬೆಳೆಸುವ ಉದ್ದೇಶವನ್ನು ರೋಟರಾಕ್ಟ್ ಕ್ಲಬ್ ಹೊಂದಿದೆ ಎಂದು ರೋಟರಾಕ್ಟ್ 3182 ಜಿಲ್ಲಾ ಗವರ್ನರ್ ಎಂ ರಾಮಚಂದ್ರಮೂರ್ತಿ ಹೇಳಿದರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಆರಂಭಗೊಂಡ ರೋಟರಾಕ್ಟ್ ಕ್ಲಬ್ ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ರೋಟರಾಕ್ಟ್ ಕ್ಲಬ್ಬಿನ ಅಧ್ಯಕ್ಷೆಯಾಗಿ ಅಮೀಕ್ಷಾ ಡಿ ನಾಯ್ಕ್ ಇವರ ಪದ ಪ್ರಧಾನ ಕಾರ್ಯಕ್ರಮವು ನಡೆಯಿತು.
ಜಿಲ್ಲಾ ರೋಟರಾಕ್ಟ್ ಚೇರ್ಮನ್ ಕಮಿಟಿ ಕೆ.ಕೆ ಕಾಂಚನ್ ಅವರು ರೋಟರಾಕ್ಟ್ ಕ್ಲಬ್ ಬಗ್ಗೆ ಮಾಹಿತಿಯನ್ನು ನೀಡಿದರು. ಅಸಿಸ್ಟೆಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ, ಡಿ ಆರ್ ಆರ್ ಗ್ಲಾಡ್ಸನ್, ಮಾಜಿ ಅಸಿಸ್ಟೆಂಟ್ ಗವರ್ನರ್ ಎಚ್ ಗಣೇಶ್ ಕಾಮತ್, ಜೋನಲ್ ಲೆಫ್ಟಿನೆಂಟ್ ರಾಮನಾಥ್ ನಾಯಕ್, ಕ್ಲಬ್ಬಿನ ಕಾರ್ಯದರ್ಶಿ ನಾರಾಯಣ ಈ ನಾಯ್ಕ್ ಮತ್ತು ರೋಟರಾಕ್ಟ್ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.
ಅಧ್ಯಕ್ಷ ರಾಜೇಶ ಎಂ ಜಿ ಸ್ವಾಗತಿಸಿ, ರೋಟರಾಕ್ಟ್ ಕ್ಲಬ್ ಕಾರ್ಯದರ್ಶಿ ರಾಮಕೃಷ್ಣ ಶೆಣೈ ವಂದಿಸಿದರು. ರೋಟರಿ ಕ್ಲಬ್ ಸದಸ್ಯೆ ಸುಗುಣ ಆರ್.ಕೆ ಕಾರ್ಯಕ್ರಮ ನಿರ್ವಹಿಸಿದರು.