ಮಲ್ಪೆ: ರಜತೋತ್ಸವವನ್ನು ಆಚರಿಸುತ್ತಿರುವ ಕೊಡವೂರು ಬ್ರಾಹ್ಮಣ ಮಹಾಸಭಾ “ರಜತ ಪಥದಲ್ಲಿ ವಿಪ್ರ ಹೆಜ್ಜೆ” ಎಂಬ ಸರಣಿ ಕಾರ್ಯಕ್ರಮದಲ್ಲಿ 25ನೇ ಕಾರ್ಯಕ್ರಮವಾಗಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ವೇದಮೂರ್ತಿ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯರ ನೇತೃತ್ವದಲ್ಲಿ ಹಾಗೂ ಸಮಿತಿಯ ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್ ರವರ ಸಂಯೋಜನೆಯಲ್ಲಿ ಕೊಡವೂರಿನ “ವಿಪ್ರಶ್ರೀ” ಸಾಂಸ್ಕ್ರತಿಕ ಕಲಾಭವನದಲ್ಲಿ ಶ್ರೀ ಲಕ್ಷ್ಮೀ ಶೋಭಾನೆ ಹಾಗು ಭಜನೆಗಳೊಂದಿಗೆ ನಡೆಯಿತು.
ಭಾಸ್ಕರ ಆಚಾರ್ಯ ಬೆಂಗಳೂರು ಇವರ ಮುಖ್ಯ ಪೂಜಾ ಸೇವೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಸಮಿತಿಯ ಅಧ್ಯಕ್ಷ ನಾರಾಯಣ ಬಲ್ಲಾಳ್, ಕೊಡವೂರು ಬ್ರಾಹ್ಮಣ ಮಹಾಸಭಾದ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.