ಬೆಳ್ಮಣ್: ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದರು.
ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಕುಂಟಲಗುಂಡಿಯಲ್ಲಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಂಗಮಂದಿರದಲ್ಲಿ ಆದಿತ್ಯವಾರ ಹಮ್ಮಿಕೊಂಡಿದ್ದ ಮಾಜಿ
ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂರವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ ’ಕಲಾಂ ನಿಮಗೊಂದು ಸಲಾಂ’ ಕಾರ್ಯಕ್ರಮದಲ್ಲಿ ಅಬ್ದುಲ್ ಕಲಾಂರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಅಬ್ದುಲ್ ಕಲಾಂ ಅವರನ್ನು ಭಾರತದ ಮಿಸೈಲ್‌ಮ್ಯಾನ್ ಎಂದು ಕರೆಯಲಾಗುತಿತ್ತು. ಭಾರತದಲ್ಲಿ ಮೊದಲು ಅಣ್ವಸ್ತ್ರ ಸಿದ್ಧಪಡಿಸಿ ದೇಶವನ್ನು ಅಣ್ವಸ್ತ್ರ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ ಕೀರ್ತಿ ಕಲಾಂ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ, ಈ ದೇಶ ಕಂಡ ಅಪ್ರತಿಮ ನಾಯಕರಲ್ಲಿ ಅಬ್ದುಲ್ ಕಲಾಂ ಒಬ್ಬರು. ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮೀಸಲಿಟ್ಟ ಮಹಾನ್ ವ್ಯಕ್ತಿ, ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ವಿಶ್ರಾಂತಿ ಪಡೆಯದೆ ತಮ್ಮ ಪ್ರೀತಿಯ ಶಿಕ್ಷಕ ವೃತ್ತಿಯಲ್ಲಿ ಜೀವನದ ಕೊನೆ ಉಸಿರು ಎಳೆದ ಮಹಾನ್ ನಾಯಕ ಕಲಾಂ ಎಂದು ಹೇಳಿದರು.
ಕಾರ್ಯಕ್ರಮದ ನಿರ್ದೇಶಕರಾದ ಬೀರೊಟ್ಟು ದಿನೇಶ್ ಪೂಜಾರಿ, ಸಂಘದ ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸತೀಶ್ ಪೂಜಾರಿ ಅಬ್ಬನಡ್ಕ, ಕಾರ್ಯದರ್ಶಿ ಸುರೇಶ್ ಪೂಜಾರಿ ಕಾಸ್ರಬೈಲು, ನಿಕಟಪೂರ್ವ ಕಾರ್ಯದರ್ಶಿ ಹರಿಪ್ರಸಾದ್
ಆಚಾರ್ಯ ಅಬ್ಬನಡ್ಕ, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಕೋಶಾಧಿಕಾರಿ ವೀಣಾ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಲಲಿತಾ ಆಚಾರ್ಯ, ಆರತಿ ಕುಮಾರಿ, ಪದ್ಮಶ್ರೀ ಪೂಜಾರಿ, ಅಶ್ವಿನಿ ಪ್ರಭಾಕರ್, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪೂಜಾರಿ, ಕಿರಣ್ ಶೆಟ್ಟಿ, ಆದರ್ಶ್ ಎಲ್. ಸುವರ್ಣ ಮೊದಲಾದವರಿದ್ದರು.