ದುಬೈ: ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಕೊಲ್ಕತಾಗೆ ಕಠಿಣ ಸವಾಲು ನೀಡಿದೆ.
ಪಂದ್ಯದ ಕೊನೆಯ ಎಸೆತದವರೆಗೆ ಆಡಿದ ಡುಪ್ಲೆಸಿಸ್ 59 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 3 ಬಾನೆತ್ತರದ ಸಿಕ್ಸರ್ ಮೂಲಕ 86 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ 32, ಉತ್ತಪ್ಪ 31 ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಆಧರಿಸಿದರು.
ಡುಪ್ಲೆಸಿಸ್- ಮೊಯಿನ್ ಆಲಿ ಜೋಡಿ ಮೂರನೇ ವಿಕೆಟಿಗೆ 68 ರನ್ ಜೊತೆಯಾಟ ನೀಡಿ ಚೆನ್ನೈ ತಂಡವನ್ನು ಸುಭದ್ರ ಸ್ಥಿತಿಯಲ್ಲಿ ಇರಿಸಲು ನೆರವಾದರು.
20 ಓವರುಗಳಲ್ಲಿ ಚೆನ್ನೈ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದೆ. ಅಂತಿಮ ಓವರ್ ಎಸೆದ ಶಿವಮ್ ಮಾವಿ ಕೇವಲ 7 ರನ್ ನೀಡಿ ಗಮನ ಸೆಳೆದರು. ವರುಣ್ ಚಕ್ರವರ್ತಿ ಪಾಲಾದ 19ನೇ ಓವರಿನಲ್ಲಿ 13 ರನ್ ಹರಿದು ಬಂತು. ಪಂದ್ಯದಲ್ಲಿ ಚೆನ್ನೈ ದಾಂಡಿಗರಿಂದ ದಂಡನೆಗೆ ಒಳಗಾದ ಫೆರ್ಗುಸನ್ ಎಸೆದ 18ನೇ ಓವರಿನಲ್ಲಿ 19 ರನ್ ಬಂತು.
ಟಾಸ್ ಗೆದ್ದ ಕೊಲ್ಕತಾ, ಚೆನ್ನೈಗೆ ಬ್ಯಾಟ್ ಮಾಡಲು ಅವಕಾಶ ನೀಡಿತು.