ಕಾರ್ಕಳ: ನವರಾತ್ರಿಯ ಸಡಗರ ಎಲ್ಲೆಡೆ ವ್ಯಾಪಿಸಿದೆ. ಕಾರ್ಕಳದ ಸಮಾಜ ಸೇವಕಿ ರಮಿತಾ ಶೈಲೇಂದ್ರ ಅವರು ವಿಭಿನ್ನವಾಗಿ ನಾಡಿನ ಜನರಿಗೆ ನವದುರ್ಗೆಯರ ಒಂದೊಂದು ಕಥೆಯನ್ನು ಹೇಳುವುದರ ಜೊತೆಗೆ, ದೇವಿಯ ಒಂಬತ್ತು ಅಲಂಕಾರವನ್ನು ಮಾಡಿ ಕಾರ್ಕಳ ಅಲ್ಲದೆ ನಾಡಿನಾದ್ಯಂತ ಜನರಿಗೆ ತಲುಪುವ ಪ್ರಯತ್ನವನ್ನು ಮಾಡಿದ್ದಾರೆ.
ಸ್ವಂತ ವ್ಯಾಪಾರವನ್ನು ಮಾಡಿಕೊಂಡಿರುವ ಇವರು ಹವ್ಯಾಸವಾಗಿ ಆರಿಸಿಕೊಂಡದ್ದು ಸಮಾಜಸೇವೆ ಕ್ಷೇತ್ರವನ್ನು. ಹಿಂದೆ ಮಂಗಳೂರಿನಲ್ಲಿ ಶಾರದ ದೇವಿಯ ಅಲಂಕಾರವನ್ನು ಮಾಡಿರುವುದನ್ನು ನೋಡಿ ತಾನು ನಮ್ಮ ಊರಿನ ಸ್ನೇಹಿತರಿಗೆ ವಿಶೇಷವಾಗಿ ದೇವಿಯ ಕಥೆಯನ್ನು ಹೇಳಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ಕೆ ಹೆಜ್ಜೆಯನ್ನಿಟ್ಟಿದ್ದಾರೆ.
ಸ್ನೇಹಿತೆ ಶಾಂತಲಾ ಅಂಚಿ ಬ್ರೈಡ್ಸ್ ಅವರು ದಿನಕ್ಕೊಂದು ದೇವಿಯ ಅಲಂಕಾರವನ್ನು ಇವರಿಗೆ ಮಾಡಿ, ಛಾಯಾಗ್ರಹಣವನ್ನು ಸುಶೀಲ್ ಖುಷಿ ಫೋಟೋಗ್ರಫಿ ಇವರು ಮಾಡಿರುತ್ತಾರೆ. ಅಲಂಕಾರವನ್ನು ವಿಡಿಯೋದಲ್ಲಿ ಮಂಜುನಾಥ್ ಪೈಯವರು ಸೆರೆಹಿಡಿದಿರುತ್ತಾರೆ.
ಕೇವಲ ಫೋಟೋ ಶೂಟ್ ಗಾಗಿ ಈ ಕಾರ್ಯಕ್ರಮವನ್ನು ಮಾಡದೆ ದೇವಿಯ ದಿವ್ಯ ರೂಪದೊಂದಿಗೆ ಚರಿತ್ರೆಯನ್ನು ತಿಳಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಿ 9 ದೇವಿ, 9 ದಿನ ಅಲಂಕಾರವನ್ನು ಮಾಡಿ ಕೊನೆಯ ದಿನ ದೇವಿಯನ್ನು ಜಲಸ್ಥಂಬನ ಕೂಡ ಮಾಡುವ ಛಾಯಾಗ್ರಹಣವನ್ನು ಮಾಡಿರುತ್ತಾರೆ.
ಇವರ ಈ ಹೊಸ ಪ್ರಯೋಗ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗುವ ಮೂಲಕ ಜನಮನ್ನಣೆ ಗಳಿಸಿದೆ.