Sunday, October 6, 2024
Sunday, October 6, 2024

ಶ್ರೀ ಕೃಷ್ಣಮಠ: ಶ್ರೀನಿವಾಸ ಕಲ್ಯಾಣ ಹರಿಕಥಾ ಸಮಾರೋಪ

ಶ್ರೀ ಕೃಷ್ಣಮಠ: ಶ್ರೀನಿವಾಸ ಕಲ್ಯಾಣ ಹರಿಕಥಾ ಸಮಾರೋಪ

Date:

ಉಡುಪಿ: ಶ್ರೀ ಕೃಷ್ಣಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಶ್ರೀ ಹಂಡೆದಾಸ ಪ್ರತಿಷ್ಠಾನ (ರಿ.) ಕಾರ್ಕಳ ಇದರ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 20.09.2021 ಸೋಮವಾರದಿಂದ 07.10.2021 ಗುರುವಾರದವರೆಗೆ 18 ದಿನಗಳ ಪರ್ಯಂತ ನಡೆಯುತ್ತಿರುವ ‘ಶ್ರೀನಿವಾಸ ಕಲ್ಯಾಣ’ದ ಹರಿಕಥಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆಯನ್ನು ವಹಿಸಿ, ಭಾಗವತದ ಕಥೆಗಳನ್ನು ಅಧ್ಯಯನ ಮಾಡಿ ಇತರರೊಂದಿಗೆ ಹರಿಕಥೆಯ ಮೂಲಕ ಮಾಡಿಸಿ ಸಾಮಾನ್ಯ ಜನರಿಗೆ ಭಗವಂತನ ಮಹಿಮೆಗಳನ್ನು ಪ್ರಸಾರ ಮಾಡಿ ಅದರ ಮೂಲಕ ತಮ್ಮ ತಂದೆ, ಅಜ್ಜ ಮುಂತಾದ ಹರಿದಾಸರ ಪರಂಪರೆಯನ್ನು ಮುಂದುವರಿಸುವಲ್ಲಿ ರುಕ್ಮಿಣಿ ಹಂಡೆಯವರು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನು ಮತ್ತು ಎಲ್ಲರನ್ನೂ ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.

ಅತಿಥಿಗಳಾದ ವಿದ್ವಾಂಸರಾದ ಎಂ.ಎಲ್.ಸಾಮಗ ಮಾತನಾಡಿ, ಇಂದಿನ ದಿನಗಳಲ್ಲಿ ಹರಿಕಥೆಯಂತಹ ಉತ್ತಮ ಕಲೆಯನ್ನು ಇಷ್ಟು ಮಂದಿಗೆ ಹೇಳಿ ಅವರಿಂದ ಕಥೆ ಹೇಳಿಸಿ ಇತರರನ್ನು ಬೆಳೆಸುವಂತಹ ರುಕ್ಮಿಣಿ ಹಂಡೆಯವರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ, ನಮ್ಮ ಜವಾಬ್ದಾರಿ ಎಂದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದವ್ಯಾಸ ಐತಾಳ ಸ್ವಾಗತಿಸಿ, ಪ್ರತಿಷ್ಠಾನದ ಸದಸ್ಯರಾದ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಮೃತೇಶ್ವರಿ ದೇಗುಲ: ಶರನ್ನವರಾತ್ರಿ ಉತ್ಸವ

ಕೋಟ, ಅ.6: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ...

ಹೂವಿನ ಕೋಲು ಕಲೆ ಮನೆ ಮನದಲ್ಲಿ ಪಸರಿಸಲಿ: ಯಕ್ಷಗುರು ದೇವದಾಸ್ ರಾವ್ ಕೂಡ್ಲಿ

ಕೋಟ, ಅ.6: ಹೂವಿನ ಕೋಲು ಕಲೆ ಮನೆ ಮನದಲ್ಲೂ ಸದಾಕಾಲ ಪಸರಿಸುತ್ತಾ...

ಪೆರಂಪಳ್ಳಿಯಲ್ಲಿ ಕಾಡುಕೋಣಗಳ ಗುಂಪು

ಉಡುಪಿ, ಅ.6: ಶನಿವಾರ (ಅಕ್ಟೋಬರ್ 5) ಮಧ್ಯರಾತ್ರಿ ಸುಮಾರು 2 ಗಂಟೆ...

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ರಜತ ವರ್ಷಾಚರಣೆಗೆ ಚಾಲನೆ

ಉಡುಪಿ, ಅ.6: ನಿರಂತರ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಧಾರ್ಮಿಕ, ಶೈಕ್ಷಣಿಕ, ಸ್ವಚ್ಛತೆ,...
error: Content is protected !!