ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಕಾರ್ಯಕಾರಿ ಸಮಿತಿ ಸಭೆಯು ಕಾಂಗ್ರೆಸ್ ಭವನದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡುತ್ತಾ, ಬೂತ್ ಸಮಿತಿ ಮತ್ತು ಗ್ರಾಮೀಣ ಸಮಿತಿಗಳನ್ನು ಪೂರ್ಣ ಪ್ರಮಾಣದಲ್ಲಿ ರಚಿಸದಿದ್ದರೆ ಮುಂದೆ ಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ಎದುರಿಸಲು ಕಷ್ಟ ಸಾಧ್ಯ. ಆದುದರಿಂದ ಎಲ್ಲರೂ ಈ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಓಸ್ಕರ್ ಫೆರ್ನಾಂಡಿಸ್ ಭವನ ಎಂದು ಹೆಸರಿಡುವುದು, ಕಾಂಗ್ರೆಸ್ ಭವನದಲ್ಲಿ ಓಸ್ಕರ್ ಫೆರ್ನಾಂಡಿಸ್‌ರವರ ಪುತ್ಥಳಿ ಪ್ರತಿಷ್ಟಾಪಿಸುವುದು ಮತ್ತು ಯಾವುದಾದರೊಂದು ರಸ್ತೆ ಇಲ್ಲವೆ ವೃತ್ತಕ್ಕೆ ಓಸ್ಕರ್ ಫೆರ್ನಾಂಡಿಸ್ ರಸ್ತೆ ಅಥವಾ ಓಸ್ಕರ್ ಫೆರ್ನಾಂಡಿಸ್ ವೃತ್ತ ಎಂದು ಹೆಸರಿಡಲು ನಗರಸಭೆಯನ್ನು ವಿನಂತಿಸುವ ಪ್ರಸ್ತಾಪವನ್ನು ಮಂಡಿಸಲಾಗಿ ಈ ಎಲ್ಲಾ ವಿಷಯಗಳನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಯಿತು. ಓಸ್ಕರ್ ಫೆರ್ನಾಂಡಿಸ್‌ರವರ ಭಾವಚಿತ್ರವನ್ನು ಎಲ್ಲಾ ಗ್ರಾಮೀಣ ಪ್ರದೇಶದ ಕಾಂಗ್ರೆಸ್ ಕಛೇರಿಗಳಲ್ಲೂ ಇಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಚಂದ್ರ ಶೆಟ್ಟಿಯವರು ಮಾತನಾಡಿ, ಮುಂದೆ ಬರುವ ಚುನಾವಣೆಗಳನ್ನು ಎದುರಿಸಲು ಸರ್ವ ಸಿದ್ಧತೆಗಳು ಆಗಬೇಕಾಗಿದೆ. ಕ್ಷೇತ್ರ ವಿಂಗಡನೆ, ಕಾಯ್ದಿರಿಸಿದ ಸ್ಥಾನ ನಿಗಾವಹಿಸಿ ಎಲ್ಲಾ ಕಾರ್ಯಕರ್ತರು ಹುರುಪಿನಿಂದ ಭಾಗವಹಿಸುವ ಅಗತ್ಯವಿದೆ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡಿ, ಆಡಳಿತ ಪಕ್ಷದ ಎಲ್ಲಾ ರೀತಿಯ ಅಕ್ರಮಗಳನ್ನು ಬಯಲಿಗೆಳೆದು ಪ್ರತಿಭಟಿಸಬೇಕು. ಬೂತ್ ಹಾಗೂ ಗ್ರಾಮೀಣ ಸಮಿತಿ ಬಲಿಷ್ಠ ಪಡಿಸುವರೆ ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು, ಆಡಳಿತ ಪಕ್ಷ ಕ್ಷೇತ್ರ ಬದಲಾಯಿಸುವ ಸಾಧ್ಯತೆ ಇದೆ ಇದನ್ನು ನಾವು ಗಮನಿಸುತ್ತಿರಬೇಕು ಎಂದರು. ಪ್ರಧಾನ ಕಾರ್ಯದರ್ಶಿ ವೈ. ಸುಕುಮಾರ್‌ರವರು ಸ್ವಾಗತಿಸಿ, ಉಪಾಧ್ಯಕ್ಷರಾದ ರಾಜು ಪೂಜಾರಿಯವರು ಧನ್ಯವಾದ ಸಮರ್ಪಿಸಿ, ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಪಕ್ಷದಲ್ಲಿ ದುಡಿದು ನಿಧನರಾದವರಿಗೆ ಪ್ರಧಾನ ಕಾರ್ಯದರ್ಶಿ ಬಿ. ಕುಶಲ್ ಶೆಟ್ಟಿಯವರು ಶ್ರದ್ಧಾಂಜಲಿ ಅರ್ಪಿಸಿದರು.
ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ರಾಜು ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್, ಸಂಪಿಗೆಹಾಡಿ ಸಂಜೀವ ಶೆಟ್ಟಿ, ದಿನೇಶ್ ಪುತ್ರನ್, ಪ್ರಖ್ಯಾತ್ ಶೆಟ್ಟಿ, ಬಿ. ನರಸಿಂಹಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ನವೀನ್‌ಚಂದ್ರ ಜೆ. ಶೆಟ್ಟಿ, ಹೆಚ್. ನಿತ್ಯಾನಂದ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ಯತೀಶ ಕರ್ಕೇರ, ಬ್ಲಾಕ್ ಅಧ್ಯಕ್ಷರುಗಳಾದ ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ನವೀನ್ ಚಂದ್ರ ಸುವರ್ಣ, ದಿನಕರ್ ಹೇರೂರು, ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್ ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ಕಿಶೋರ್ ಕುಮಾರ್ ಎರ್ಮಾಳ್, ಗೀತಾ ವಾಗ್ಳೆ, ಸಂಕಪ್ಪ ಎ, ಶಶಿಧರ ಶೆಟ್ಟಿ ಎಲ್ಲೂರು, ಜಯರಾಮ್ ನಾಯ್ಕ್, ಡೆರಿಕ್ ಡಿ’ಸೋಜಾ, ರೋಶನಿ ಒಲಿವರ್, ಹರೀಶ್ ಶೆಟ್ಟಿ ಪಾಂಗಾಳ, ರೋಶನ್ ಶೆಟ್ಟಿ, ಬಿ. ಭುಜಂಗ ಶೆಟ್ಟಿ, ಶ್ಯಾಮಲ ಭಂಡಾರಿ, ಉದ್ಯಾವರ ನಾಗೇಶ್ ಕುಮಾರ್, ಚಂದ್ರಶೇಖರ್ ಶೆಟ್ಟಿ, ರಾಘವ ದೇವಾಡಿಗ, ಮುಸ್ತಾಖ್ ಅಹ್ಮದ್, ಸತೀಶ್ ಕಿಣಿ, ಕೀರ್ತಿ ಶೆಟ್ಟಿ, ಹಬೀಬ್ ಅಲಿ, ಪ್ರಶಾಂತ್ ಜತ್ತನ್ನ, ಬಿಪಿನ್‌ಚಂದ್ರ ಪಾಲ್ ನಕ್ರೆ, ವಿಕಾಸ್ ಹೆಗ್ಡೆ, ಪಿ. ಬಾಲಕೃಷ್ಣ ಪೂಜಾರಿ, ಡಾ. ಸುನೀತಾ ಶೆಟ್ಟಿ, ರಾಜೇಶ್ ಶೆಟ್ಟಿ ಬ್ರಹ್ಮಾವರ, ಲೂಯಿಸ್ ಲೋಬೊ, ಸತೀಶ್ ಕೊಡವೂರು, ಅಬ್ದುಲ್ ಅಜೀಜ್ ಹೆಜಮಾಡಿ, ಉಪೇಂದ್ರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.