ಪಟ್ಲ: ಯು.ಎಸ್.ನಾಯಕ್ ಪ್ರೌಢಶಾಲೆ ಪಟ್ಲ ಇದರ ಚುನಾವಣೆ ಸಾಕ್ಷರತ ಸಂಘದ ಆಶ್ರಯದಲ್ಲಿ 2021-22 ನೇ ಸಾಲಿನ ಶಾಲಾ ಸಂಸತ್ತುನ್ನು ಇನ್ಫೋಸಿಸ್ ಮಂಗಳೂರು ಉದ್ಯೋಗಿ ಶಾಲಾ ಹಳೆ ವಿದ್ಯಾರ್ಥಿ ನಿಖಿಲ್ ಪ್ರಭು ರವರು ಉದ್ಘಾಟಿಸಿದರು. ಬಳಿಕ ಮಾತಾನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ನೈತಿಕತೆ, ಸನ್ನಡತೆ, ಆತ್ಮಸ್ಥೆರ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಸಂಸ್ಕಾರ ಹೊಂದಿರಬೇಕು. ಇದರಿಂದಾಗಿ ಮುಂದೆ ಉತ್ತಮ ನಾಗರಿಕವಾಗಿ ಬೆಳೆಯಲು ಸಾಧ್ಯವಾಗುವುದು ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಶಿಕ್ಷಕ ಶ್ರೀಕಾಂತ ಪ್ರಭು ವಿದ್ಯಾರ್ಥಿ ಸರ್ಕಾರದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಮಂತ್ರಿಗಳು ಸ್ವ ಆಸಕ್ತಿಯಿಂದ ಕಾರ್ಯನಿರ್ವಹಿಸಿ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೂಳ್ಳಬೇಕೆಂದು ಹೇಳಿದರು.
ಚುನಾವಣ ಸಾಕ್ಷರತಾ ಕ್ಲಬ್ನ ಮಾರ್ಗದರ್ಶಿ ಶಿಕ್ಷಕರಾಗಿರುವ ಶಾಂತಪ್ಪ ಮೂಲಂಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಲಬ್ನ ಧ್ಯೇಯ ಹಾಗೂ ಉದ್ದೇಶಗಳನ್ನು ವಿವರಿಸಿದರು. ವಿಸ್ಮಿತಾ ಮಂತ್ರಿಗಳ ಪಟ್ಟಿ ವಾಚಿಸಿದರು. ಮಮತಾ ವಂದಿಸಿದರು. ಜೀವನ್ ಕಾರ್ಯಕ್ರಮ ನಿರೂಪಿಸಿದರು.