ಪುತ್ತೂರು: ಕುಂಜೂರು ಪಂಜ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಇಂದು ನಡೆಯಿತು. ಪಂಚಾಯತ್ ಅಧ್ಯಕ್ಷೆ ಸರಸ್ವತಿ ಪುಸ್ತಕ ವಿತರಣೆ ಮಾಡಿ, ಮಕ್ಕಳ ಹೆತ್ತವರು ಕರೋನಾ ಮಹಾಮಾರಿಯ ಈ ಸಮಯದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದರು. ಸಂಚಾಲಕ ಮಹಾಬಲ ರೈ ಯವರು ಪೋಷಕರು ಮಕ್ಕಳ ಬಗ್ಗೆ ನಿಗಾ ವಹಿಸುತ್ತಾ ಏನಾದರೂ ಸಮಸ್ಯೆ ಇದ್ದರೆ ಸಮಿತಿಯ ಗಮನಕ್ಕೆ ತರಬೇಕು. ಬರೆಯುವ ಪುಸ್ತಕಗಳನ್ನು ಶಾಲೆಯಿಂದಲೇ ಕೊಡಲಾಗುವುದು ಎಂದರು.
ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ, ಶಾಲೆಯ ಕಟ್ಟಡ ಅಭಿವೃದ್ದಿ ಆಗಿದೆ. ನಾಲ್ವರು ಶಿಕ್ಷಕರು ಇದ್ದಾರೆ, ನಿವೃತ್ತ ಶಿಕ್ಷಕಿ, ರಂಜಿನಿಯವರೂ ಶಾಲೆಗೆ ಬಂದು ಪಾಠದಲ್ಲಿ ಕೈ ಜೋಡಿಸ್ತಾ ಇದ್ದಾರೆ. ಸಿಸಿ ಟಿವಿ ಕೂಡ ಇದೆ. ಉತ್ತಮ ವ್ಯವಸ್ಥೆ ಇರವುದನ್ನು ಹೆತ್ತವರು ಗಮನಿಸಿ ಮಕ್ಕಳ ಸಂಖ್ಯೆ ಈಗಿರುವ 76 ರಿಂದ ಬರುವ ವರ್ಷ 150 ಕ್ಕೆ ತಲುಪುವಂತೆ ಪ್ರಚಾರ ಕೊಡಬೇಕೆಂದರು.
ಮುಖ್ಯೋಪಾಧ್ಯಾಯ ಉದಯ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಮೋನಿಕಾ ಸ್ವಾಗತಿಸಿ ಶಿಕ್ಷಕಿ ರಶ್ಮಿ ವಂದನಾರ್ಪಣೆಗೈದರು.