ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಕಡಿಮೆಯಾಗಿದ್ದ ಮಳೆ ಮತ್ತೆ ಚುರುಕನ್ನು ಪಡೆದುಕೊಂಡಿದೆ. ಸೋಮವಾರದಿಂದ
ಮುಂಗಾರು ಮತ್ತೆ ಚುರುಕುಗೊಂಡಿದೆ.
ಆಂಧ್ರಪ್ರದೇಶ ಕರಾವಳಿಯ ಉತ್ತರ ಭಾಗದಲ್ಲಿ ನಿಮ್ನ ಒತ್ತಡ ಉಂಟಾಗಿರುವುದರಿಂದ ಕರಾವಳಿಯಾದ್ಯಂತ ಹವಾಮಾನ ಇಲಾಖೆ ಇಂದು ಎಲ್ಲೋ ಅಲರ್ಟ್ ಘೋಷಿಸಿದೆ. ಗಾಳಿ ಹಾಗೂ ಅಲೆಗಳ ಅಬ್ಬರವೂ ಹೆಚ್ಚಾಗುವ ಸಾಧ್ಯತೆಯಿದೆ.
ಉಡುಪಿ ತಾಲೂಕಿನ ಹಲವೆಡೆ ಇಂದು ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು. ಹಲವೆಡೆ ಇಂದು ಬೆಳಗ್ಗೆ ಉತ್ತಮ ಮಳೆಯಾಗಿದೆ.